Select Your Language

Notifications

webdunia
webdunia
webdunia
webdunia

ನಡು ರೋಡಿನಲ್ಲಿ ಬಿತ್ತು ಪ್ರಾಧ್ಯಾಪಕನ ಹೆಣ; ಕಾರಣ?

ನಡು ರೋಡಿನಲ್ಲಿ ಬಿತ್ತು ಪ್ರಾಧ್ಯಾಪಕನ ಹೆಣ; ಕಾರಣ?
ಮಂಗಳೂರು , ಮಂಗಳವಾರ, 28 ಮೇ 2019 (17:46 IST)
ಐಟಿಐ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ರಸ್ತೆಯಲ್ಲಿಯೇ ಹೆಣ ಎಸೆದು ಹೋಗಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಘಟನೆ ನಡೆದಿದೆ.  ಮುಂಡೂರು ನಿವಾಸಿ ಶ್ರೀ ವಿಕ್ರಮ್ ಜೈನ್ (41) ಎಂಬವರನ್ನು ರಸ್ತೆಯ ಬದಿಯಲ್ಲಿಯೇ ಯಾರೋ ದುಷ್ಕರ್ಮಿಗಳು  ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.

ವಿಕ್ರಮ್ ಜೈನ್ ರವರು ಮಾಲಾಡಿ ಐಟಿಐ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುತ್ತಾರೆ. ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಟೋಲ್ ಗೇಟ್ ನಲ್ಲಿ ಆಗಿದ್ದೇನು?