Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಖರ್ಗೆಗೆ ಸಚಿವ ಸ್ಥಾನ ಕೊಟ್ಟಿರುವುದು ತಪ್ಪು: ಮಲಕರೆಡ್ಡಿ ವಾಗ್ದಾಳಿ

ಪ್ರಿಯಾಂಕಾ ಖರ್ಗೆ
ಬೆಂಗಳೂರು , ಭಾನುವಾರ, 19 ಜೂನ್ 2016 (15:10 IST)
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಿಯಾಂಕಾ ಖರ್ಗೆಯವರಿಗೆ ಸಚಿವ ಸ್ಥಾನ ನೀಡಿರುವುದು ತಪ್ಪು ಎಂದು ಶಾಸಕ ಎ.ಬಿ.ಮಲಕರೆಡ್ಡಿ ಹೇಳಿದ್ದಾರೆ.
 
ಮಲ್ಲಿಕಾರ್ಜುನ್ ಖರ್ಗೆಯವರೊಂದಿಗೆ 40 ವರ್ಷಗಳ ಕಾಲ ರಾಜಕೀಯ ಜೀವನ ಮಾಡಿದ್ದೇನೆ. ಅವರ ವಿರುದ್ಧ ಯಾವತ್ತೂ ಮಾತನಾಡಿರಲಿಲ್ಲ. ಆದರೆ ಅವರ ನಡೆ ನುಡಿ ಪ್ರೋತ್ಸಾಹದಾಯಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಖರ್ಗೆಯವರು ವಿಶಾಲ ಮನೋಭಾವನೆ ಇಟ್ಟುಕೊಳ್ಳಬೇಕು. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ, ಕೇವಲ ತಮ್ಮ ಪುತ್ರನಿಗೆ ಸಚಿವ ಸ್ಥಾನ ನೀಡಲು ಇತರರನ್ನು ಬಲಿಕೊಟ್ಟಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ನಾಲ್ಕು ಬಾರಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ದೊರೆಯುತ್ತಿಲ್ಲ. ಒಂದೇ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ಹೇಗೆ ದೊರೆಯುತ್ತದೆ?ಇಂತಹ  ಷಡ್ಯಂತ್ರಗಳಿಂದಲೇ ಕಾಂಗ್ರೆಸ್ ಪಕ್ಷದ ಶಕ್ತಿ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ಕಿಡಿಕಾರಿದರು.
 
ಮಲ್ಲಿಕಾರ್ಜುನ್ ಖರ್ಗೆಯವರ ಬಗ್ಗೆ ನನಗೆ ತುಂಬಾ ಗೌರವವಿತ್ತು. ಆದರೆ, ಅವರು ತಮ್ಮ ಗೌರವವನ್ನು ತಾವೇ ಕಳೆದುಕೊಂಡಿದ್ದಾರೆ ಎಂದು ಯಾದಗಿರಿ ಶಾಸಕ ಎ.ಬಿ.ಮಲಕರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಮಾಣ ವಚನ ಸ್ವೀಕಾರ : ರಾಜಭವನದಲ್ಲಿ ಭರ ಸಿದ್ದತೆ