ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಭರದ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಯಾಗುತ್ತಿರುವ ಸಚಿವರು, ಇತರ ಸಚಿವರುಗಳಿಗೆ ಸ್ಥಾನ ಮೀಡಲಾಗಿಡಲಿದ್ದರೆ ಎರಡನೇ ಸಾಲಿನಲ್ಲಿ ವಿಧಾನಪರಿಷತ್ ಸದಸ್ಯರು ಮತ್ತು ವಿಐಪಿಗಳಿಗೆ ಸ್ಥಾನ ಮೀಸಲಾಗಿಡಲಾಗಿದೆ. ಅವರ ಹೆಸರಿರುವ ಸೀಟುಗಳಲ್ಲಿ ಮಾತ್ರ ಸ್ಥಾನ ಅಲಂಕರಿಸುವಂತೆ ನೂತನ ಸಚಿವರುಗಳಿಗೆ ಕಡ್ಡಾಯವಾಗಿ ಆದೇಶ ನೀಡಲಾಗಿದೆ.
10 ಸಾಲುಗಳ ನಂತರ ಇತರರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್‌ಸಿಡಿಯಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ನೇರ ಪ್ರಸಾರ ಮಾಡಲಾಗುತ್ತಿದೆ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜಭವನದ ಮುಂದೆ ಪಟಾಕಿ ಸಿಡಿಸಿವುದನ್ನು ನಿಷೇಧಿಸಲಾಗಿದೆ.
ಸುಮಾರು 1000 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ನೇರ ಪ್ರಮಾಣ ವಚನ ಸ್ವೀಕಾರ ವೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ