Select Your Language

Notifications

webdunia
webdunia
webdunia
webdunia

ಕೆಪಿಎಸ್‌ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗುತ್ತೆ: ಆರ್‌ ಅಶೋಕ್

KPSC Scam
ಬಳ್ಳಾರಿ: ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಕೆಪಿಎಸ್‌ಸಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆ ಆಗುತ್ತೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.   

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಬರ, KPSC ಹಗರಣ ಸೇರಿದಂತೆ ನಾನಾ ವಿಚಾರಗಳನ್ನಿಟ್ಟು ಕೊಂಡು ಪಾದಯಾತ್ರೆ ಮಾಡ್ತಿದ್ದೇವೆ. ವಾಲ್ಮೀಕಿ ಹಗರಣ ಸಂಬಂಧ ನಾವು  ಸದನದಲ್ಲಿ ಹೋರಾಟ ಮಾಡಿದ್ದರಿಂದ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ.  ವಾಲ್ಮೀಕಿ ನಿಗಮದ ಹಣ ಬಡವರಿಗೆ ಸೇರಬೇಕು. ಅಲ್ಲಿವರೆಗೂ ನಾವು ಹೋರಾಟ ಮಾಡ್ತೆವೆ ಎಂದರು.

ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗದೇ ಇರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಾನು ಹೆಚ್‌ಡಿಕೆ ಅವರ ಬಳಿ ಮಾತನಾಡುವೆ. ನಮ್ಮ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು NDA ಮೈತ್ರಿಕೂಟವಾಗಿಯೇ ಕೆಲಸ ಮಾಡುತ್ತಿದ್ದೇವೆ. 
ಯಾವುದೇ ಗೊಂದಲವಿಲ್ಲ. ಪಾದಯಾತ್ರೆಗೆ ಟಕ್ಕರ್ ಕೊಡಲು ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರು, ಸಂಸದರು ಸುದ್ದಿಗೋಷ್ಠಿ ಮಾಡಲಿ, ಯಾರೂ ಬೇಡ ಅಂದರು. ದಲಿತರ ದುಡ್ಡು ತಿಂದಿಲ್ವಾ? ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲಿ ಎಂದು ಕುಟುಕಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಈ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲದು: ವಿಜಯೇಂದ್ರ ಎಚ್ಚರಿಕೆ, Video