Select Your Language

Notifications

webdunia
webdunia
webdunia
webdunia

ಯಾವುದೇ ಐಟಿ, ಇಡಿ ಭಯದಿಂದ ಎಸ್ಕೇಪ್ ಆಗಿಲ್ಲ, ಜ್ಞಾನೇಂದ್ರ ನಾಪತ್ತೆ ಸಂಬಂಧ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

Priyank Kharge
ಬೆಂಗಳೂರು: ಮಾಧ್ಯಮಗಳಲ್ಲಿ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಸಂಬಂಧ ಸುದ್ದಿ ಪ್ರಕಟವಾಗುತ್ತಿದ್ದ ಹಾಗೇ ಅವರು ನಾಪತ್ತೆಯಾಗಿಲ್ಲ,  ಅವರ ತಂದೆ ಅನಾರೋಗ್ಯದ ಹಿನ್ನೆಲೆ ಊರಿಗೆ ಹೋಗಿದ್ದಾರೆಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡದರು.  

ಪಶುವೈದ್ಯಧಾರಿ ಪರೀಕ್ಷೆ ಅಕ್ರಮ ಸಂಬಂಧ ಕೆಪಿಎಸ್‌ಸಿ ಕಚೇರಿ, ಸೇರಿದಂತೆ ಹಲವು ಕಡೆಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ ನಂತರ ಪರೀಕ್ಷೆ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.  

ದೆಹಲಿಗೆ ತೆರಳಲು ವಿಮಾನ ಟಿಕೆ ಬುಕ್ ಮಾಡಿದ್ದ ಅಧಿಕಾರಿ  ಆಗಸ್ಟ್ 20 ರಂದು ದೆಹಲಿಗೆ ತೆರಳಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯ ‌ ಫ್ಲೈಟ್‌ಗೆ 1 ಗಂಟೆ 31 ನಿಮಿಷಕ್ಕೆ ಟಿಕೆಟ್ ಬುಕ್ಕಿಂಗ್ ಆಗಿದೆ. ಒಂದೂವರೆ ಗಂಟೆ ಮುಂಚಿತವಾಗಿ ಜ್ಞಾನೇಂದ್ರ ಕುಮಾರ್ 30,253 ರೂಪಾಯಿ ಹಣ ನೀಡಿ ತರಾತುರಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿರುವುದು ಕಂಡುಬಂದಿತ್ತು. ಈ ಸಂಬಂಧ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಜ್ಞಾನೇಂದ್ರ ಕುಮಾರ್‌ ಅವರನ್ನ ಪತ್ತೆಮಾಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ರು.

ಅಧಿಕಾರಿಗಳು ಪರಿಶೀಲಿಸಿದ ಬಳಿಕ ಮಾಹಿತಿ ಪಡೆದು ಮಾತನಾಡಿದ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರ ತಂದೆಗೆ ಹೃದಯ ಸಂಬಂಧ ಕಾಯಿಲೆ ವಿಚಾರ ತಿಳಿದು ಇದೀಗ ತುರ್ತಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.  

ಹೋಗುವಾಗ ಮೇಲ್ ಮೂಲಕ ಮೇಲಾಧಿಕಾರಿಗೆ ತಿಳಿಸಿದ್ದಾರೆ. ಆದ್ರೆ ನಿನ್ನೆ ಹಬ್ಬದ ಇದ್ದ ಕಾರಣ ನೋಡಿಕೊಂಡಿಲ್ಲ. ಇನ್ನೂ ಎರಡು ದಿನದಲ್ಲಿ ಅವರ ಬೆಂಗಳೂರಿಗೆ ವಾಪಸು ಬರಲಿದ್ದಾರೆ. ಯಾವುದೇ ಐಟಿ, ಇಡಿ ಭಯದಿಂದ ಎಸ್ಕೇಪ್ ಆಗಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಕೆಎಫ್‌ಸಿಯಲ್ಲಿ ಕೆಟ್ಟ ಮಾಂಸ ಪತ್ತೆ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಮುಂದಾದ ಯುಟಿ ಖಾದರ್‌