Publish Date: Sat, 08 Jul 2023 (19:50 IST)
Updated Date: Sat, 08 Jul 2023 (18:52 IST)
ಕಲಬುರಗಿ DC ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಾಟರ್ ಬೋರ್ಡ್ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. KDP ಸಭೆಗೆ ರಿಪೋರ್ಟ್ ತೆಗೆದುಕೊಂಡು ಬರದಿದ್ದಕ್ಕೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ದಾಖಲೆ ತರದೆ ಇಲ್ಲಿ ಸರ್ಕಾರದ ಗೋಡಂಬಿ, ದ್ರಾಕ್ಷಿ ತಿನ್ನೋಕ್ಕೆ ಬಂದಿದ್ದೀರಾ? ನಮಗೇನು ಮಾಡೋಕೆ ಬೇರೆ ಕೆಲ್ಸ ಇಲ್ವಾ? ನೀವು ರಿಪೋರ್ಟ್ ತರೋವರಗೆ ನಾವು ಇಲ್ಲಿ ಕಾಯ್ತಾ ಕುತ್ಕೊಬೇಕಾ ಎಂದು ಅಧಿಕಾರಿಗಳ ಬೆವರು ಇಳಿಸಿದ್ದಾರೆ. ನಗರದಲ್ಲಿ L&T ಕಂಪನಿ ಕುಡಿಯೋ ನೀರಿಗೆ ಅಳವಡಿಸುತ್ತಿರುವ ಪೈಪ್ ಕಳಪೆ ಮಟ್ಟದ್ದು ಅಂತ ಆರೋಪ ಕೇಳಿ ಬಂದ ಹಿನ್ನೆಲೆ ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಕ್ಸ್‌ಮೋ ಕಂಪನಿ ಪೈಪ್ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.