ಸದನದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯನ್ನು ಏಕವಚನದಲ್ಲಿ ಶಾಸಕ ನರೇಂದ್ರ ಸ್ವಾಮಿ ನಿಂದಿಸಿದ್ದಾರೆ. ಹೀಗಾಗಿ ಶಾಸಕ ನರೇಂದ್ರ ಸ್ವಾಮಿ, ಕ್ಷಮೆಯಾಚನೆ ಮಾಡಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದ್ದಾರೆ.. ಮಂಡ್ಯದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರೋದು ಸರಿಯಲ್ಲ. ಈ ದುರಾಂಕಾರದ ನಡತೆಯನ್ನ ಮಳವಳ್ಳಿ ಶಾಸಕರು ಬಿಡಬೇಕು.. ಈ ಕೂಡಲೇ ಕುಮಾರಣ್ಣ ಅವರನ್ನ ಕ್ಷಮೆ ಕೋರಬೇಕು.. ಸಿಎಂ ಆಗಿ ರಾಜ್ಯದ ಬಡವರ ಪರ ಕೆಲಸ ಮಾಡಿದಂತಹ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಖಂಡನೀಯ.. ಈ ದುರ್ನಡನೆ ದುರಾಂಕಾರದ ನಡವಳಿಕೆಯನ್ನ ನೀವು ತಿದ್ದಿಕೊಳ್ಳಿ. ಅವರ ಪರ ಕಾರ್ಯಕರ್ತರು ಇನ್ನೂ ಬದುಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಏನು ಅನ್ನೋದನ್ನ ತೋರಿಸಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕೂಡಲೇ ನರೇಂದ್ರ ಸ್ವಾಮಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ