Daily Horoscope

Select Your Language

Notifications

webdunia
webdunia
webdunia
webdunia

ಮೂರು ಜನ ನೀಟ್ ಪರೀಕ್ಷೆ ಬರೆದಿದ್ದಕ್ಕೆ ನಾವು ಕಾರಣ ಅಲ್ಲ: ಪ್ರಿಯಾಂಕ್ ಖರ್ಗೆ

Priyank Kharge
ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷೆ ಬರೆಯಲಾಗಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಸಮಾವೇಶ ಕಾರಣ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿತ್ತು. ಈ ಬಗ್ಗೆ ಈಗ ಗೃಹಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಬಿಜೆಪಿಯವರ ಬಳಿ ಏನೂ ಪಾಠ ಕಲಿಯಬೇಕಾಗಿಲ್ಲ. 22 ಲಕ್ಷ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ರಲ್ಲಾ?  ನಿಜವಾಗಿ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು. ಕಳೆದ 10 ವರ್ಷಗಳಲ್ಲಿ 90 ಪೇಪರ್ ಲೀಕ್ ಆಗಿದೆ. ಅದರ ಬಗ್ಗೆ ಕ್ಷಮೆ ಕೇಳಲಿ.

ಮೂರು ಜನ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಅದಕ್ಕೆ ಬೇರೆಯೇ ಕಾರಣವಿದೆ. ಒಬ್ಬರು ಮಾಗಡಿಯಿಂದ ಬರಬೇಕಿತ್ತು. ಮತ್ತೊಬ್ಬರು ಆರ್ ಟಿ ನಗರದಿಂದ ಬರಬೇಕಿತ್ತು. ಅವರು ತಡವಾಗಿ ಬಂದಿದ್ದರು. ಒಬ್ಬರು ಹಳೆಯ ಹಾಲ್ ಟಿಕೆಟ್ ತಂದಿದ್ದರು. ಅದಕ್ಕೇ ಬರೆಯಲಾಗಲಿಲ್ಲ. ನಾವು ಕಾರಣ ಅಲ್ಲ.

ಬೇರೆಯವರು ಹೇಗೆ ಪರೀಕ್ಷೆ ಬರೆದರು? ಅವರೆಲ್ಲಾ ಹೇಗೆ ಹೋದರು? ದೆಹಲಿಯಲ್ಲೂ ಕೆಲವರಿಗೆ ಪರೀಕ್ಷೆ ಬರೆಯಲಾಗಲಿಲ್ಲ. ಮುಂಬೈನಲ್ಲೂ ಕೆಲವರಿಗೆ ಆಗಲಿಲ್ಲ. ಅದಕ್ಕೆ ಬಿಜೆಪಿ ಸರ್ಕಾರ ಅಲ್ವಾ ಕಾರಣ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ