Publish Date: Fri, 19 Jun 2026 (15:37 IST)
Updated Date: Fri, 19 Jun 2026 (15:38 IST)
ಬೆಂಗಳೂರು: ನಿನ್ನೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ 11 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಅಡ್ಡ ಮತ ಹಾಕಿದವರು ಯಾರು ಎಂದು ಪತ್ತೆ ಮಾಡಲು ಬಿಜೆಪಿ ವಿಶೇಷ ತಂಡ ರಚಿಸಿದೆ.
ಕಾಂಗ್ರೆಸ್ ಗೆ ಹೆಚ್ಚುವರಿಯಾಗಿ 11 ಮತಗಳು ಬಿದ್ದಿವೆ. ಇದರಿಂದ ಸುಲಭವಾಗಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇತ್ತ ಬಿಜೆಪಿಯ ಎರಡು ಅಭ್ಯರ್ಥಿಗಳು ಗೆದ್ದರೆ ಜೆಡಿಎಸ್ ಅಭ್ಯರ್ಥಿ ಸೋತಿದ್ದಾರೆ. ಇದರ ಬೆನ್ನಲ್ಲೇ ಅಡ್ಡಮತ ಹಾಕಿದವರು ಯಾರು ಎಂಬ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಹಲವು ಹೆಸರುಗಳು ಈ ನಡುವೆ ಹರಿದಾಡುತ್ತಿವೆ. ಇದರಲ್ಲಿ ಕೆಆರ್ ಪುರಂ ಶಾಸಕ ಭೈರತಿ ಬಸವರಾಜು, ಕೃಷ್ಣ ನಾಯಕ್, ಚಂದ್ರು ಲುಮಾಣಿ ಹೆಸರುಗಳು ಕೇಳಿಬಂದಿವೆ. ಆದರೆ ಈ ಶಾಸಕರು ಅಡ್ಡಮತ ಹಾಕಿದ ಬಗ್ಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಳ್ಳಿ ಹಾಕಿದ್ದಾರೆ. ಇದೆಲ್ಲಾ ಬಿಜೆಪಿಯಲ್ಲಿ ಬೆಂಕಿ ಹಚ್ಚಲು ಕಾಂಗ್ರೆಸ್ ತೇಲಿಬಿಡುತ್ತಿರುವ ಹೆಸರುಗಳು ಎಂದಿದ್ದಾರೆ. ಇದರ ಜೊತೆಗೆ ಯಾರೆಲ್ಲಾ ಅಡ್ಡ ಮತ ಹಾಕಿದ್ದಾರೆ ಎಂದು ತಿಳಿಯಲು ಸಿಟಿ ರವಿ, ಕೊಳ್ಳೇಗಾಲದ ಮಾಜಿ ಶಾಸಕ ಮಹೇಶ್ ಮತ್ತು ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇದರೊಂದಿಗೆ ಸತ್ಯ ಹೊರಬೀಳಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ