Daily Horoscope
✕

UKG ಮಗುವನ್ನ ಫೇಲ್‌ ಮಾಡಿದ ಖಾಸಗಿ ಶಾಲೆ!

Webdunia
ಶುಕ್ರವಾರ, 10 ಫೆಬ್ರವರಿ 2023 (16:39 IST)
ಸರ್ಕಾರ 9ನೇ ತರಗತಿಯವರೆಗೂ ವಿದ್ಯಾರ್ಥಿಗಳನ್ನ ಯಾವುದೇ ಕಾರಣ ಕೊಟ್ಟು ಫೇಲ್ ಮಾಡಬಾರದೆಂದು ನಿಯಮ ಮಾಡಿದ್ದರೂ UKG ಮಗುವನ್ನ ಖಾಸಗಿ ಶಾಲೆಯೊಂದು ಫೇಲ್‌ ಮಾಡಿತ್ತು. UKG ಮಗುವನ್ನ ಫೇಲ್ ಮಾಡಿ ಸೆಂಟ್​​​ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ ಹೊಸ ವಿವಾದಕ್ಕೆ ಗುರಿಯಾಗಿತ್ತು. ಬೆಂಗಳೂರಿನ ಆನೇಕಲ್​​ನಲ್ಲಿರುವ ಸೆಂಟ್​​​ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆ UKG ಓದುತ್ತಿದ್ದ 6 ವರ್ಷದ ನಂದಿನಿಯನ್ನ ಫೇಲ್​​ ಮಾಡಿತ್ತು. ಇದರಿಂದ ಗಾಬರಿಗೊಂಡ, ಮಗುವಿನ ಪೋಷಕರು ಸ್ಕೂಲ್ ಮ್ಯಾನೇಜ್ಮೆಂಟ್​ನ್ನು ಸಂಪರ್ಕಿಸಿದ್ರೂ ಈ ವಿಚಾರದಲ್ಲಿ ಯಾವುದೇ ಕ್ರಮ ಜರುಗಿಸದ ಶಾಲೆ ಮೌನಕ್ಕೆ ಶರಣಾಗಿತ್ತು. ಇದನ್ನರಿತ BEO ಜಯಲಕ್ಷ್ಮೀ ಖಾಸಗಿ ಶಾಲೆಗೆ ನೋಟಿಸ್ ನೀಡಿ ವಿದ್ಯಾರ್ಥಿನಿ ಫೇಲ್ ಬಗ್ಗೆ ಮಾಹಿತಿ ಕೇಳಿ, ವಿವರಣೆ ನೀಡದಿದ್ದರೆ ಶಾಲಾ ಅನುಮತಿ ರದ್ದು ಮಾಡುತ್ತೇನೆಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸರುವ ಶಾಲೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಿಲ್ಲ, ಪ್ರಶ್ನೆಗಳಿಗೆ ಉತ್ತರಿಸದ ಕಾರಣ ಕಡಿಮೆ ಅಂಕ ಕೊಡಲಾಗಿದೆ ಎಂದು ಸೆಂಟ್ ಜೋಸೆಫ್ ಚಾಮಿನೆಡ್ ಅಕಾಡೆಮಿ ಸ್ಪಷ್ಟನೆ ನೀಡಿದೆ.
=====================

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಳಿಯನಲ್ಲ ಅಕ್ಷರಶಃ ಕಟುಕ.. ಮನೆಗೆ ನುಗ್ಗಿ ವೃದ್ಧ ಮಾವನ ಮೇಲೆ ಈತ ಮಾಡಿದ ಕೆಲಸಕ್ಕೆ ಏನು ಹೇಳಿದ್ರೂ ಕಡಿಮೆಯೇ Video

ಅರ್ನಬ್ ಚಂಡಮಾರುತಕ್ಕೆ ಮರಗಳೇ ಬಿಲ್ಲಿನಂತೆ ಬಾಗಿದ ಭೀಕರ ದೃಶ್ಯ ವೈರಲ್ Video

ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದ ಡಿಕೆ ಶಿವಕುಮಾರ್: ಇದನ್ನು ಹೇಳಕ್ಕೆ ಇಷ್ಟು ದಿನ ಬೇಕಾಯ್ತಾ ಎಂದ ಜೆಡಿಎಸ್

ಪ್ರಮೋದಾದೇವಿ ಒಡೆಯರ್ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ: ರಾಜಮನೆತನಕ್ಕೆ ನೀಡುವ ಗೌರವದಲ್ಲಿ ಲೋಪವಿಲ್ಲ

ಮನೆಯ ನೆಲದ ಅಡಿಯಿಂದ ವಿಚಿತ್ರ ಶಬ್ದ: ರಹಸ್ಯ ಭೇದಿಸಲು ನೆಲ ಅಗೆದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್ Video

ಮುಂದಿನ ಸುದ್ದಿ
Show comments