Select Your Language

Notifications

webdunia
webdunia
webdunia
webdunia

ಟರ್ಕಿಯಲ್ಲಿ ನಾಪತ್ತೆಯಾಗಿದ್ದು ಕನ್ನಡಿಗನಲ್ಲ

Disappeared in Turkey and not Kannadigas
ಟರ್ಕಿ , ಶುಕ್ರವಾರ, 10 ಫೆಬ್ರವರಿ 2023 (16:33 IST)
ಟರ್ಕಿಯಲ್ಲಿ ಬೆಂಗಳೂರು ಮೂಲದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ನಾಪತ್ತೆಯಾದ ವ್ಯಕ್ತಿ ಕರ್ನಾಟಕದವರಲ್ಲ, ಉತ್ತರಾಖಂಡ್ ರಾಜ್ಯದವರು ಎನ್ನಲಾಗಿದೆ. ಉತ್ತರಾಖಂಡ್​ನ ಡೆಹ್ರಾಡೂನ್​ನ ಬಲವಾಲದ ನಿವಾಸಿ 35 ವರ್ಷದ ವಿಜಯ್ ಕುಮಾರ್ ನಾಪತ್ತೆಯಾಗಿರುವ ವ್ಯಕ್ತಿ. ಇವರು ಬೆಂಗಳೂರು ಮೂಲದ ಆಕ್ಸಿ ಪ್ಲ್ಯಾಂಟ್ ಇಂಡಿಯಾ ಎಂಬ ಕಂಪನಿಯ ಉದ್ಯೋಗಿ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯ ವಿಪತ್ತು ನಿರ್ಹಣಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಆಕ್ಸಿ ಪ್ಲ್ಯಾಂಟ್ ಇಂಡಿಯಾದಲ್ಲಿ ಪ್ಲ್ಯಾಂಟ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್ ಅವರು ಕೆಲಸದ ನಿಮಿತ್ತ ಕಳೆದ ವಾರ ಟರ್ಕಿಗೆ ತೆರಳಿದ್ದರು. ಟರ್ಕಿಯ ಕುಲ್ಕು ಗಾಜ್ ಎಂಬ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಗೆ ಆಕ್ಸಿ ಪ್ಲ್ಯಾಂಟ್ ಸಂಸ್ಥೆ ಅಸಿಟಿಲೀನ್ ಗ್ಯಾಸ್ ಘಟಕವನ್ನು ನಿರ್ಮಿಸುತ್ತಿದೆ. ಈ ಯೋಜನೆ ಸಂಬಂಧ ಪ್ಲ್ಯಾಂಟ್ ಎಂಜಿನಿಯರ್ ಆಗಿ ವಿಜಯ್ ಕುಮಾರ್ ಟರ್ಕಿಗೆ ಹೋಗಿದ್ದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಣರಂಗವಾಯ್ತು ಸೀಮಂತ ಕಾರ್ಯಕ್ರಮ