Select Your Language

Notifications

webdunia
webdunia
webdunia
webdunia

ಪ್ರಧಾನಿ ಪ್ರತಿಕೃತಿ ದಹನ: ತೀವ್ರಗೊಂಡ ಪ್ರತಿಭಟನೆ

ಪ್ರಧಾನಿ ಪ್ರತಿಕೃತಿ ದಹನ: ತೀವ್ರಗೊಂಡ ಪ್ರತಿಭಟನೆ
ದಾವಣಗೆರೆ , ಬುಧವಾರ, 9 ಜನವರಿ 2019 (15:20 IST)
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ 2ನೇ ದಿನವಾದ ಇಂದೂ ಮುಂದುವರೆದಿದೆ.

ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ ವಿವಿಧ ಸಂಘಟನೆಗಳು ಬಹಿರಂಗ ಸಭೆ ನಡೆಸಿ ಕೇಂದ್ರಸರ್ಕಾರದ ವಿರುದ್ದ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಐಟಿಯುಸಿ ಕಾರ್ಮಿಕ ಸಂಘಟನೆಯವರು ನಗರದ ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರು ಸ್ವಾತಂತ್ರ ಪೂರ್ವಕ್ಕೂ ಮೊದಲು ಮತ್ತು ಸ್ವಾತಂತ್ರ ನಂತರವು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿಕೊಂಡು ಬಂದರು ಸಹ ಅಧಿಕಾರಕ್ಕೆ ಬಂದಂತಹ ಯಾವುದೇ ರಾಜಕೀಯ ಪಕ್ಷಗಳು ಕಾರ್ಮಿಕರ ಪರವಾಗಿ ನಿಂತಿಲ್ಲ.

ಬದಲಿಗೆ ಕಾರ್ಮಿಕರ ಶೋಷಣೆ ಮತ್ತು ವಿರುದ್ದವಾಗಿದೆ. ಕೇಂದ್ರ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದಂತಹ ಭರವಸೆಗಳನ್ನು ಈಡೇರಿಸಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ಎಫ್ ಡಿ ರದ್ದು, ಭ್ರಷ್ಟಾಚಾರ, ಲೋಕಪಾಲ್ ಮಸೂದೆ ತರುವುದಾಗಿ ಹೇಳಿದ್ದರು. ರಕ್ಷಣಾ ಮತ್ತು ರೈಲ್ವೆಯಲ್ಲಿ ಎಫ್ ಡಿ ಜಾರಿಗೆ ತಂದರು ನಾಲ್ಕುವರೆ ವರ್ಷ ಆಡಳಿತ ನಡೆಸಿದರು ಯಾವುದನ್ನು ಜಾರಿಗೆ ತರಲಿಲ್ಲ, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಗಳ ಬೆಲೆ ಗಗನಕ್ಕೆರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆ ಮೇಲೆ ರೇಪ್: ಆರೋಪಿಗೆ ಜೈಲು ಶಿಕ್ಷೆ