Publish Date: Mon, 13 Feb 2023 (17:32 IST)
Updated Date: Mon, 13 Feb 2023 (17:35 IST)
ಬೆಂಗಳೂರು : ಏರೋ ಇಂಡಿಯಾ ಶೋ ಉದ್ಘಾಟಿಸಲು ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಯವರು ರಾಜಭವನದಲ್ಲಿ ಮಹತ್ವದ ಕಾರ್ಯವೊಂದನ್ನು ನೆರವೇರಿಸಿದ್ದಾರೆ.
ಹೌದು. ಭಾನುವಾರ ಬೆಂಗಳೂರಿಗೆ ಬಂದಿರುವ ಪ್ರಧಾನಿ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ರಾಜಭವನದ ಮುಂಭಾಗದ ಹುಲ್ಲುಹಾಸಿನಲ್ಲಿ ಶ್ರೀಗಂಧದ ಸಸಿಯನ್ನು ನೆಟ್ಟರು.
ಈ ಸಂದರ್ಭಧಲ್ಲಿ ರಾಜಭವನದಲ್ಲಿನ ಸಸ್ಯಗಳು, ಜಾತಿಗಳು, ಗುಣಲಕ್ಷಣಗಳು ಮತ್ತು ಬಳಕೆಯ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನ ಮಂತ್ರಿಯವರಿಗೆ ವಿವರಿಸಿದರು.