Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಅಭಿವೃಧಿಗೆ ಒಂದು ಪೈಸೆಯೂ ನೀಡಿಲ್ಲ: ಡಿಕೆ ಶಿವಕುಮಾರ್

DCM DK Shivkumar

Sampriya

ಬೆಂಗಳೂರು , ಮಂಗಳವಾರ, 21 ಅಕ್ಟೋಬರ್ 2025 (15:05 IST)
ಬೆಂಗಳೂರು: ಬೆಂಗಳೂರಿನಲ್ಲಿ ಸುಮಾರು 500 ಕಿ.ಮಿ. ರಸ್ತೆಯನ್ನು ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದವಾಗುತ್ತಿದ್ದು, ಮುಂದಿನ ವಾರದೊಳಗೆ ಅಂತಿಮಗೊಳಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಗಾಂಧಿ ನಗರ ಕ್ಷೇತ್ರದ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿದರು.

ಇನ್ನೂ ಬೆಂಗಳೂರು ಅಭಿವೃದ್ದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಪೈಸೆ ಕೂಡಾ ನೀಡಿಲ್ಲ. ಸಂಸದರೂ ಬೆಂಗಳೂರು ಪ್ರಗತಿ, ತೆರಿಗೆ ಹಂಚಿಕೆ ಅನ್ಯಾಯದ ಬಗ್ಗೆ ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಈಗಾಗಲೇ ₹1800 ಕೋಟಿ ವೆಚ್ಚದಲ್ಲಿ 82 ರಸ್ತೆ ವೈಟ್ ಟ್ಯಾಪಿಂಗ್ ಗೆ ಯೋಜನೆ ಜಾರಿಯಲ್ಲಿದೆ. ಇದರಲ್ಲಿ 104 ಕಿ.ಮಿ. ಹೊಸ ರಸ್ತೆಯೂ ಸೇರಿದೆ. ಇದಲ್ಲದೇ ₹695 ಕೋಟಿ ವೆಚ್ಚದಲ್ಲಿ 350 ಕಿ.ಮಿ. ರಸ್ತೆ ಗುಂಡಿ ಮುಚ್ಚಲಾಗಿದೆ ಎಂದರು.

ಈಗಾಗಲೇ 10 ಸಾವಿರದಷ್ಟು ರಸ್ತೆ ಗುಂಡಿಗಳನ್ನು ಬೆಂಗಳೂರು ನಗರದಲ್ಲಿ ಮುಚ್ಚಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ 20 ಸಾವಿರ ಗುಂಡಿ ಇದ್ದುದನ್ನು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನಾವು ಪ್ರಾಮಾಣಿಕವಾಗಿಯೇ ಬೆಂಗಳೂರು ಅಭಿವೃದ್ದಿಗೆ ಒತ್ತು ನೀಡುತ್ತಿದ್ದೇವೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸೋದನ್ನು ಸಿದ್ದರಾಮಯ್ಯನವರನ್ನು ನೋಡಿ ಕಲಿಯಬೇಕು: ಉಮಾಶ್ರೀ