Select Your Language

Notifications

webdunia
webdunia
webdunia
webdunia

ಖಾಸಗಿ ಬಸ್ ಗೆ ಸರ್ಕಾರವೇ ಅವಕಾಶ ಕೊಟ್ಟರೂ ಈ ವ್ಯವಸ್ಥೆ ಇಲ್ಲ!

ಖಾಸಗಿ ಬಸ್ ಗೆ ಸರ್ಕಾರವೇ ಅವಕಾಶ ಕೊಟ್ಟರೂ ಈ ವ್ಯವಸ್ಥೆ ಇಲ್ಲ!
ಬೆಂಗಳೂರು , ಬುಧವಾರ, 7 ಏಪ್ರಿಲ್ 2021 (10:25 IST)
ಬೆಂಗಳೂರು: ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಸರ್ಕಾರ ಖಾಸಗಿ ಬಸ್ ಗಳಿಗೆ ಅನುಮತಿ ನೀಡಿದೆ.


ಆದರೂ ಪ್ರಯಾಣಿಕರ ಅಳಲು ನಿಂತಿಲ್ಲ. ಖಾಸಗಿ ಬಸ್ ಗಳಿಗೆ ಸರ್ಕಾರವೇ ಟಿಕೆಟ್ ದರ ನಿಗದಿಗೊಳಿಸಿದೆ. ಆದರೆ ಈ ಬಸ್ ಗಳಲ್ಲಿ ಪಾಸ್ ಮಾಡಿಸಿಕೊಂಡವರಿಗೆ ರಿಯಾಯಿತಿ ಸಿಗುತ್ತಿಲ್ಲ. ಟಿಕೆಟ್ ದರ ನೀಡಿಯೇ ಪ್ರಯಾಣ ಮಾಡಬೇಕಾಗುತ್ತದೆ.

ಇದರಿಂದಾಗಿ ತಿಂಗಳ ಪಾಸ್ ಮಾಡಿಸಿಕೊಂಡವರಿಗೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ಕೆಲವೆಡೆ ಖಾಸಗಿ ಬಸ್ ನವರು ದುಪ್ಪಟ್ಟು ಹಣ ಕಿತ್ತ ಪ್ರಕರಣಗಳೂ ನಡೆದಿವೆ. ಒಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಮುಷ್ಕರದ ಲಾಭವನ್ನು ಖಾಸಗಿ ಬಸ್ ನವರು ಪೀಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್ ಗೆ ಜನರ ಹಿಡಿಶಾಪ