Publish Date: Wed, 21 Feb 2024 (19:20 IST)
Updated Date: Wed, 21 Feb 2024 (19:59 IST)
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಮುಂಬೈ :ಭಾರತೀಯ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ , ಸಾಧನೆ ಸಲ್ಲಿಸಿದವರಿಗೆ ಕೊಡಮಾಡುವ 2024 ನೇ ಸಾಲಿನ “ದಾದಾ ಸಾಹೇಬ್ ಫಾಲ್ಕೆ” ಪ್ರಶಸ್ತಿ ಸೋಮವಾರ ಪ್ರಕಟವಾಗಿದೆ.ನಟ ಶಾರೂಖ್ ಖಾನ್ ಜವಾನ್ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ, ಹಾಗೂ ನಯನ ತಾರಾ ಅತ್ಯುತ್ತಮ ನಟಿ ಪ್ರಶಸ್ತಗೆ ಭಾಜನರಾಗಿದ್ದಾರೆ. ಅನಿಮಲ್ ಸಿನಿಮಾದ ಖಳನಾಯಕನ ಪಾತ್ರಕ್ಕೆ ಬಾಬಿ ಡಿಯೋಲ್ ಸಹ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ.
ವಿಮರ್ಶಕರ ವಿಭಾಗದಲ್ಲಿ ಸಾಮ್ ಬಹುದ್ದೂರ್ ಚಿತ್ರದ ನಟ ವಿಕ್ಕಿ ಕುಶಾಲ್ ಉತ್ತಮ ನಟ ಹಾಗೂ ಅನಿಮಲ್ ಸಿನಿಮಾದ ಹಾಸ್ಯನಟ ಸಂದೀಪ್ ರೆಡ್ಡಿ ವಂಗ ಕೂಡ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.