Select Your Language

Notifications

webdunia
webdunia
webdunia
webdunia

ಮದ್ಯ ಪ್ರಿಯರಿಗೆ ಬಿಗ್ ಶಾಕ್ - ರಾಜ್ಯದಲ್ಲಿ ಪಾನ ನಿಷೇಧ ಜಾರಿ?

ಮದ್ಯ ಪ್ರಿಯರಿಗೆ ಬಿಗ್ ಶಾಕ್ - ರಾಜ್ಯದಲ್ಲಿ ಪಾನ ನಿಷೇಧ ಜಾರಿ?
ಹುಬ್ಬಳ್ಳಿ , ಬುಧವಾರ, 4 ಡಿಸೆಂಬರ್ 2019 (16:14 IST)
ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.

ಡಿಸೆಂಬರ್ 7 ರ  ಬೆಳಿಗ್ಗೆ 9.45 ಕ್ಕೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಿಂದ ತಹಸೀಲ್ದಾರ ಕಚೇರಿ ವರೆಗೆ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಹೀಗಂತ ನಗರದ ಮದ್ಯ ವಿರೋಧಿ ಆಂದೋಲನ ಡಾ.ವೀಣಾ ಮಾಧವ ಹೇಳಿದ್ದಾರೆ.

 ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರ ಕನಸಾದ ಸಂಪೂರ್ಣ ಪಾನ ಪ್ರತಿಬಂಧದಡೆಗೆ ಸಾಗಬೇಕು ಎಂಬಂತೆ ಅವರ 150 ನೇ ಜನ್ಮ ದಿನದ ಹಿನ್ನಲೆಯಲ್ಲಿ ಸರಕಾರ ಮದ್ಯ ಬ್ಯಾನ್ ಮಾಡಬೇಕು. ಕುಡಿತದ ಹಾವಳಿಯಿಂದ ಹಲವಾರು ಸಂಸಾರಗಳು ಹಾಳಾಗುತ್ತಿದ್ದು, ಹೆಣ್ಣುಮಕ್ಕಳ ಮೇಲಿನ ಕೌಟುಂಬಿಕ ದೌರ್ಜನ್ಯದ ಸಂಖ್ಯೆಗಳು ಹೆಚ್ಚಾಗುತ್ತಿವೆ. ಕೂಡಲೇ ರಾಜ್ಯ ಸರ್ಕಾರ ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಸಂಪೂರ್ಣ ಪಾನ‌ ನಿಷೇಧ ಮಾಡಬೇಕೆಂದು ಆಗ್ರಹಿಸಿ ಮೌನ ಮೆರವಣಿಗೆ ಮಾಡಲಾಗುತ್ತಿದೆ ಎಂದಿದ್ದಾರೆ.

ಇದು ಸಾಮಾಜಿಕ ಆಂದೋಲನ ಆಗಿದ್ದು, ಅವಳಿ ನಗರದ ಮದ್ಯ ವಿರೋಧಿಗಳು, ಸಾಮಾಜಿಕ ಕಳಕಳಿ ಇರುವ ಜನರು ಮೌನ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಬಟ್ಟೆ ಬಿಚ್ಚಿ ಕಾಮತೃಷೆ ತೀರಿಸಿಕೊಂಡ ಪಾಪಿ ತಂದೆ – ಹುಡುಗಿ ಖಲ್ಲಾಸ್