119 ಸಾಧಕರಿಗೆ ಪದ್ಮಪ್ರಶಸ್ತಿ: ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ
bangalore , ಸೋಮವಾರ, 8 ನವೆಂಬರ್ 2021 (19:34 IST)
ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ 119 ಜನರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 7 ಮಂದಿಗೆ ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ.
ಪುರಸ್ಕೃತರಲ್ಲಿ 29 ಮಹಿಳೆಯರು, 16 ಮಂದಿಗೆ ಮರಣೋತ್ತರ ಪ್ರಶಸ್ತಿ ಮತ್ತು ಒಬ್ಬರು ತೃತಿಯ ಲಿಂಗಿ ಪ್ರಶಸ್ತಿ ಸೇರಿದ್ದಾರೆ.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಮರಣೋತ್ತರ), ಒಲಿಂಪಿಯನ್ ಪಿವಿ ಸಿಂಧು, ನಟಿ ಕಂಗನಾ ರಣಾವತ್ ಸೇರಿದಂತೆ ಪ್ರಮುಖರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.
ಗಾಯಕರಾದ ಸುರೇಶ್ ವಾಡ್ಕರ್ ಮತ್ತು ಅದ್ನಾನ್ ಸಾಮಿ, ಹಿಂದೂಸ್ತಾನಿ ಶಾಸ್ತ್ರೀಯ ಪ್ರತಿಪಾದಕ ಪಂಡಿತ್ ಛನ್ನುಲಾಲ್ ಮಿಶ್ರಾ, ಕೋವಿಡ್-19 ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಐಸಿಎಂಆರ್‌ನ ಮಾಜಿ ಮುಖ್ಯ ಗಾಯಕ ಡಾ. ರಾಮನ್ ಗಂಗಾಖೇಡ್ಕರ್, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಏರ್ ಮಾರ್ಷಲ್ ಡಾ ಪದ್ಮಾ ಬಂದೋಪಾಧ್ಯಾಯ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮವಿಭೂಷಣ ಪ್ರಶಸ್ತಿಗೆ ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕದಿಂದ ಕಲೆ ಮಾತಾ ಬಿ. ಮಂಜಮ್ಮ ಜೋಗತಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ಕ್ರೀಡೆಯಲ್ಲಿ ಕೆ. ವೈ. ವೆಂಕಟೇಶ್ ಸೇರಿದಂತೆ ಪದ್ಮಶ್ರೀ ಪ್ರಶಸ್ತಿಗೆ ಕೊರಳೊಡ್ಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮುಂದಿನ ಸುದ್ದಿ