Select Your Language

Notifications

webdunia
webdunia
webdunia
webdunia

ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ
ಉಡುಪಿ , ಭಾನುವಾರ, 18 ಜೂನ್ 2017 (12:08 IST)
ಮೊದಲ ಹಂತದ ಮೆಟ್ರೋ ಉದ್ಘಾಟನೆಗೆ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆ.
 
ವಿಶೇಷ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಿದ ರಾಷ್ಟ್ರಪತಿ ಮುಖರ್ಜಿಗೆ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರು ಭವ್ಯ ಸ್ವಾಗತ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಕೂಡಾ ಮುಖರ್ಜಿಯವರನ್ನು ಆತ್ಮಿಯವಾಗಿ ಬರಮಾಡಿಕೊಂಡರು.
 
ಉಡುಪಿ ಮಠಕ್ಕೆ ಭೇಟಿ ನೀಡಿದ ರಾಷ್ಟ್ರಪತಿಯವರಿಗೆ ಪೇಜಾವರ್ ಶ್ರೀಗಳು ಸೇರಿದಂತೆ ಮಠದ ಹಿರಿಯ, ಕಿರಿಯ ಸ್ವಾಮಿಜಿಗಳು ಬರಮಾಡಿಕೊಂಡರು.
 
ಉಡುಪಿ ಶ್ರೀಕೃಷ್ಣದೇವರ ದರ್ಶನ ಪಡೆದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೆಲ ಕಾಲ ಸ್ವಾಮಿಜಿಗಳೊಂದಿಗೆ ಸಂವಾದ ನಡೆಸಿದರು.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಟೆಕ್ಕಿಗೆ ಲೈಂಗಿಕ ಕಿರುಕುಳ: ಕಾಮುಕ ಮುರಳಿ ಅರೆಸ್ಟ್