Select Your Language

Notifications

webdunia
webdunia
webdunia
webdunia

ಮಹಿಳೆ ಟೆಕ್ಕಿಗೆ ಲೈಂಗಿಕ ಕಿರುಕುಳ: ಕಾಮುಕ ಮುರಳಿ ಅರೆಸ್ಟ್

ಮಹಿಳೆ ಟೆಕ್ಕಿಗೆ ಲೈಂಗಿಕ ಕಿರುಕುಳ: ಕಾಮುಕ ಮುರಳಿ ಅರೆಸ್ಟ್
ಬೆಂಗಳೂರು , ಭಾನುವಾರ, 18 ಜೂನ್ 2017 (11:21 IST)
ಬಿಹಾರ್ ಮೂಲದ ಮಹಿಳಾ ಟೆಕ್ಕಿಯ ಮೇಲೆ ಹಲ್ಲಿ ಎಸೆದೆು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಕೆಲ ದಿನಗಳ ಹಿಂದೆ ಮಹಿಳೆ ಟೆಕ್ಕಿ ಕಚೇರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಹಿಂದೆ ಬಂದ ಮುರಳಿ ಆಕೆಯ ಮೇಲೆ ಹಲ್ಲಿ ಎಸೆದಿದ್ದ. ಮೈಮೇಲೆ ಹಲ್ಲಿ ಬಿದ್ದಿದ್ದರಿಂದ ಮಹಿಳೆ ಗಾಬರಿಯಾಗಿದ್ದಳು ಹಲ್ಲಿ ತೆಗೆಯುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ.
 
ಮಹಿಳೆ ಜೋರಾಗಿ ಕೂಗಿದ್ದರಿಂದ ಮೈಮೇಲೆ ಜೇನುಹುಳ ಕುಳಿತಿತ್ತು. ಅದನ್ನು ತೆಗೆದಿದ್ದೇನೆ ಎಂದು ಹೇಳಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.
 
ಮಹಿಳಾ ಟೆಕ್ಕಿ ಆರೋಪಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದರು. ಇಂದು ಪೊಲೀಸರನ್ನು ಕಂಡಕೂಡಲೇ ಪರಾರಿಯಾಗಲು ಯತ್ನಿಸಿದ ಮುರಳಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ಪ್ರಣಬ್ ಮುಖರ್ಜಿ