Select Your Language

Notifications

webdunia
webdunia
webdunia
webdunia

ಬೇರೆ ರಾಜ್ಯದವರನ್ನು ಹೊರಗೆ ಕಳಿಸಲು ಸಿದ್ಧತೆ

ಬೇರೆ ರಾಜ್ಯದವರನ್ನು ಹೊರಗೆ ಕಳಿಸಲು ಸಿದ್ಧತೆ
ರಾಯಚೂರು , ಶನಿವಾರ, 16 ಮೇ 2020 (17:52 IST)
ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಸಿಲುಕಿಕೊಂಡಿರುವ ಬೇರೆ ಬೇರೆ ರಾಜ್ಯದವರನ್ನು ಅವರ ಊರಿಗೆ ಕಳಿಸಲು ಸಿದ್ಧತೆಗಳು ನಡೆಯುತ್ತಿವೆ.

ರಾಯಚೂರು ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಅನ್ಯರಾಜ್ಯಗಳ ಕಾರ್ಮಿಕರನ್ನು ಸುರಕ್ಷಿತವಾಗಿ ಆಯಾ ರಾಜ್ಯಗಳಿಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಹೊರ ರಾಜ್ಯಗಳಿಂದ ಆಗಮಿಸಿದ್ದ ಕಾರ್ಮಿಕರು ಹಾಗೂ ಇತರರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಜಿಲ್ಲೆಯಲ್ಲಿ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ.

ಈ ತಿಂಗಳ 20 ರಿಂದ 22ರೊಳಗೆ ಮೊದಲಿಗೆ ಉತ್ತರ ಪ್ರದೇಶದ ಕಾರ್ಮಿಕರನ್ನು ಕಳುಹಿಸಿಕೊಡಲಾಗುತ್ತಿದೆ. ನಂತರದಲ್ಲಿ ಮಧ್ಯ ಪ್ರದೇಶ, ಬಿಹಾರ ಹಾಗೂ ಜಾರ್ಖಂಡ್‌ನ ಜನರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಉಚಿತ ಮಾಸ್ಕ್