Publish Date: Sun, 11 Nov 2018 (19:37 IST)
Updated Date: Sun, 11 Nov 2018 (19:39 IST)
ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನಕ್ಕಾಗಿ ಪೂರ್ವ ಸಿದ್ಧತೆ ಕುಂದಾನಗರಿಯಲ್ಲಿ ಸಾಗಿದೆ.
ಬೆಳಗಾವಿಯಲ್ಲಿ ವಿಧಾನಸಭೆ ಸಭಾಧ್ಯಕ್ಷ ರಮೇಶಕುಮಾರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಿದ್ಧತೆಯನ್ನು ಪರಿಶೀಲನೆ ನಡೆಸಲಿದ್ದಾರೆ.
ಅಧಿವೇಶನಕ್ಕಾಗಿ ಅಗತ್ಯವಿರುವ ವಸತಿ, ಊಟೋಪಚಾರ, ಭದ್ರತೆ ಸೇರಿದಂತೆ ಇತರ ಸಿದ್ಧತೆಗಳ ಬಗ್ಗೆ ಜಿಲ್ಲೆಯ ಆಡಳಿತ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.
ಕುಂದಾನಗರಿ ಖ್ಯಾತಿಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಸರಕಾರ ನಡೆಸುತ್ತಾ ಬರುತ್ತಿದೆ.