Publish Date: Sat, 10 Feb 2024 (20:42 IST)
Updated Date: Sat, 10 Feb 2024 (20:46 IST)
ಬೆಂಗಳೂರು-ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸಂತೋಷ್ ಲಾಡ್ ರವರು ಕಟ್ಟಡ ಕಾರ್ಮಿಕರಿಗೆ ಗುಂಪು ವಸತಿ ಮತ್ತು ವಿಮೆ ಯೋಜನೆ ಜಾರಿಗೆ ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಮೂರು ಮಹಡಿಯ ಜೆ ಪ್ಲಸ್ 2 ಮನೆಗಳನ್ನು ನಿರ್ಮಿಸಿ ಕಾರ್ಮಿಕರಿಗೆ ನೀಡಲಾಗುವುದು. ಕಾರ್ಮಿಕರ ಹೆಸರಲ್ಲಿ ಸೈಟ್ ಇದ್ದರೆ ಮಾತ್ರ ಮನೆ ಕಟ್ಟಿಸಿಕೊಳ್ಳಲು ಅನುದಾನ ನೀಡುವ ವ್ಯವಸ್ಥೆ ಇತ್ತು. ಇದರಿಂದ ಬಹಳಷ್ಟು ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಪ್ಪಿಗೆ ಪಡೆದು ಅಧಿಕೃತವಾಗಿ ಘೋಷಣೆ ಮಾಡಲು ಸಿದ್ಧತೆ ನಡೆದಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.