Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದಿಂದ 3.2ಸಿಮ್ ಕಾರ್ಡ್ ನಿಷೇಧ

ಸಿಮ್

geetha

ನವದೆಹಲಿ , ಗುರುವಾರ, 8 ಫೆಬ್ರವರಿ 2024 (18:42 IST)
ನವದೆಹಲಿ-ಮಂಗಳವಾರ ಲೋಕಸಭೆಯಲ್ಲಿ ಸರ್ಕಾರ ಕೇಂದ್ರ ಸರ್ಕಾರವು 3.2 ಲಕ್ಷ ಸಿಮ್ ಕಾರ್ಡ್ಗಳನ್ನು  ನಿರ್ಬಂಧಿಸಿದ್ದು,ಈ ಮಾಹಿತಿಯನ್ನು ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ, ಸೈಬರ್ ಹಗರಣಗಳನ್ನು ನಿಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
 
ರಾಜ್ಯಗಳು ದೂರು ನೀಡಿದ್ದ ಅನ್ವಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (14 ಸಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್ಮೆಂಟ್ ಸಿಸ್ಟಮ್ ಸುಮಾರು 11.28 ಲಕ್ಷ ದೂರುಗಳನ್ನು ಸ್ವೀಕರಿಸಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ದೂರು ಸೈಬರ್ ವಂಚನೆಗೆ ಸಂಬಂಧಿಸಿದೆ ಮತ್ತು ಅವುಗಳನ್ನು 2023 ರಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದಾಖಲಿಸಿವೆ.

ಆನ್ ಲೈನ್ ಸೈಬರ್ ಕ್ರೈಮ್ ದೂರು ನೀಡುವುದು ಹೇಗೆ? ರಾಷ್ಟ್ರೀಯ ಸೈಬರ್ ಅಪರಾಧ (https://cybercrime.gov.in/) ಸೈಬರ್ ಅಪರಾಧವನ್ನು ವರದಿ ಮಾಡುವ ಆನ್ಲೈನ್ ಪೋರ್ಟಲ್ ಆಗಿದೆ. ಇಲ್ಲಿ ನೀವು ಆರ್ಥಿಕ ವಂಚನೆ, ಮಹಿಳೆಯರು / ಮಕ್ಕಳಿಗೆ ಸಂಬಂಧಿಸಿದ ಅಪರಾಧ ಮತ್ತು ಇತರ ಸೈಬರ್ ಅಪರಾಧಗಳ ದೂರುಗಳನ್ನು ಸಲ್ಲಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಇಲಾಖೆಯಲ್ಲಿ 800 ತಂತ್ರಜ್ಞರ ನೇಮಕ