ಗರ್ಭಧರಿಸಿದ್ದ ಗೋವಿನ ಹತ್ಯೆ ಪ್ರಕರಣ: ಓರ್ವ ಅರೆಸ್ಟ್‌

Sampriya
ಶನಿವಾರ, 25 ಜನವರಿ 2025 (17:41 IST)
ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.  

ಪ್ರಕರಣ ಭೇದಿಸಿದ ಹೊನ್ನಾವರ ಪೊಲೀಸರು ಇಂದು ಓರ್ವನನ್ನು ಅರೆಸ್ಟ್ ಮಾಡಿದ್ದಾರೆ.  

ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವಿನ ವಧೆ ಮಾಡಿ, ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಹೊತ್ತೊಯ್ದಿದ್ದ. ಈ ಪ್ರಕರಣ ಭಾರೀ ಸದ್ದು ಮಾಡಿತ್ತು.

ಉತ್ತರ ಕನ್ನಡ  ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋ ಹತ್ಯೆ ನಡೆದಿತ್ತು. ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಹೈಕಮಾಂಡ್ ಮೀಟಿಂಗ್ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಮುಂದಿನ ಸುದ್ದಿ
Show comments