ಪ್ರೀತ್ಸೆ ಅಂತ ಪ್ರಾಣಾ ತಿಂದ ಪ್ರೇಮಿ ಚೂರಿ ಚುಚ್ಚಿ ಆ ಕೆಲಸ ಮಾಡಿದ

ಬುಧವಾರ, 18 ಸೆಪ್ಟಂಬರ್ 2019 (18:30 IST)
ಪ್ರೀತ್ಸೆ ಅಂತ ಹುಡುಗಿಯೊಬ್ಬಳ ಬೆನ್ನುಬಿದ್ದ ಪಾಗಲ್ ಪ್ರೇಮಿಯೊಬ್ಬ ಹುಡುಗಿಗೆ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾನೆ.

ಆತ ಅವಳನ್ನು ಪ್ರೀತಿಸುತ್ತಿದ್ದನು. ಆದರೆ ಆ ಯುವತಿ ಆತನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಆದರೂ ಆಕೆ ಬಗ್ಗೆ ಹುಚ್ಚು ಹಚ್ಚಿಸಿಕೊಂಡಿದ್ದ ಪಾಗಲ್ ಪ್ರೇಮಿ ಆ ಯುವತಿಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದನು.

ಹುಡುಗಿ ಆತನ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ. ಹೀಗಾಗಿ ಮೊದ ಮೊದಲಿಗೆ ಆತ ಆಕೆಗೆ ಬೆದರಿಕೆ ಹಾಕಲಾರಂಭಿಸಿದ್ದಾನೆ.

ಆದರೆ ಹುಚ್ಚುತನ ಹೆಚ್ಚಿಸಿಕೊಂಡ ಭೂಪ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಗೆ ಚೂರಿ ಇರಿದು ಪರಾರಿಯಾಗಿದ್ದಾನೆ.

ಚಿಕ್ಕಮಗಳೂರುದ ಬಾಳೆಹೊನ್ನೂರುದ ಗಂಡಿಗೇಶ್ವರದ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿಯಾಗಿದ್ದಾನೆ. ಖಾಂಡ್ಯದ ಯುವತಿ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಯಾಣಿಕರ ಲಗೇಜ್‌ ಮರೆತು ಇಸ್ತಾನ್‌ಬುಲ್‌ಗೆ ಹೊರಟ ಇಂಡಿಗೋ