ಮೈಸೂರು: ಜಿಲ್ಲೆಯಲ್ಲಿ ಪೊಲೀಸರಿಗೆ ಸಿಎಂ ಪುತ್ರ ಎಂಎಲ್ ಸಿ ಯತೀಂದ್ರ ಕಾಟ ಹೆಚ್ಚಾಗಿದೆ. ಏನೇ ಕೆಲಸವಾಗಬೇಕಾದರೂ ಇಲ್ಲಿ ಯತೀಂದ್ರಗೆ ಕಪ್ಪ ಕೊಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಈಗ ಸಿದ್ದರಾಮಯ್ಯ ಪುತ್ರ ಯತೀಂದ್ರನದ್ದೇ ಕಾರುಬಾರು. ಅವರೀಗ ವರ್ಗಾವಣೆ ಸಚಿವರಾಗಿದ್ದಾರೆ. ಯಾವುದೇ ವರ್ಗಾವಣೆ ಆಗಬೇಕಾದರೂ ಯತೀಂದ್ರಗೆ ತೆರಿಗೆ ಕಟ್ಟಬೇಕು. ಕಲೆಕ್ಷನ್ ವಿಚಾರದಲ್ಲಿ ಯಾರು ಹೆಚ್ಚು ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡುತ್ತೇವೆ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ.
ಪೊಲೀಸರಿಗೆ ಯತೀಂದ್ರ ಕಾಟ ಹೆಚ್ಚಾಗಿದೆ. ಯಾವ ಜಾತಿಯವರು ಎಂದು ನೋಡಿ ಕೇಸ್ ಹಾಕುವ ಪರಿಸ್ಥಿತಿ ಬಂದಿದೆ. ವರ್ಗಾವಣೆ, ಜಾತಿ ಕಾಟ ಹೆಚ್ಚಾಗಿದೆ. ಸಿಎಂ ಅವರೇ ಮೊದಲು ನಿಮ್ಮ ಮಗನಿಗೆ ವಸೂಲಿ ದಂಧೆ ನಿಲ್ಲಿಸಲು ಹೇಳಿ. ಅಥವಾ ಇದಕ್ಕೆಲ್ಲಾ ನೀವೇ ರೂವಾರಿಯಾ ಹೇಳಿ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಹಕ್ಕಿ ಪಿಕ್ಕಿ ಜನಾಂಗದ ಪುಟ್ಟ ಬಾಲಕಿಯ ರೇಪ್ ಆಂಡ್ ಮರ್ಡರ್ ಆಗಿದೆ. ಯಾವನಾದರೂ ಇದರ ಬಗ್ಗೆ ಮಾತನಾಡುತ್ತಾರಾ? ಬಾಯಿ ಬಿಟ್ಟರೆ ಇಸ್ರೇಲ್, ಟ್ರಂಪ್ ಎಂದು ಮಾತನಾಡುವ ಕಾಂಗ್ರೆಸ್ ನಾಯಕರು ತಾಕತ್ತಿದ್ದರೆ ಇದರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.