ಮೋದಿ ಇಲ್ಲದೇ ನಾನಿಲ್ಲ: ಟಿಕೆಟ್ ಗಾಗಿ ಕೊನೆಯ ಪ್ರಯತ್ನದಲ್ಲಿ ಪ್ರತಾಪ್ ಸಿಂಹ ಮಾತು

Krishnaveni K
ಬುಧವಾರ, 13 ಮಾರ್ಚ್ 2024 (10:11 IST)
Photo Courtesy: Twitter
ಬೆಂಗಳೂರು: ಮೈಸೂರಿನಲ್ಲಿ ಈ ಬಾರಿ ಲೋಕಸಭೆ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಪ್ರಧಾನಿ ಮೋದಿ ಬಗ್ಗೆ ಮತ್ತೊಮ್ಮೆ ಹೊಗಳಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಹಿರಿಯ ಸಂಸದ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾದ ಪ್ರತಾಪ್ ಸಿಂಹ ಟಿಕೆಟ್ ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ‘ದೆಹಲಿಯಲ್ಲಿ ಈಗಷ್ಟೇ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿ ಒಂದು ಗಂಟೆ ಮಾತುಕತೆ ನಡೆಸಿದೆ. ನಾನು ಈ ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ನರೇಂದ್ರ ಮೋದಿ ಜಿ ಇಲ್ಲದೇ ನಾನೇನೂ ಇಲ್ಲ. ನನಗೆ ಟಿಕೆಟ್ ಸಿಗಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಸಿಗದೇ ಇದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ’ ಎಂದಿದ್ದಾರೆ.

ಅವರ ಈ ಟ್ವೀಟ್ ಗೆ ಹಲವಾರು ಜನ ಕಾಮೆಂಟ್ ಮಾಡಿದ್ದು, ಯಾವುದೇ ಕಾರಣಕ್ಕೂ ನಿಮಗೆ ಟಿಕೆಟ್ ಕೊಡದೇ ಇರಬಾರದು. ನಿಮ್ಮ ಕೆಲಸಗಳನ್ನು ಜನ ಖಂಡಿತಾ ಮರೆಯಲ್ಲ ಎಂದಿದ್ದಾರೆ. ಬೇರೆ ರಾಜ್ಯದವರೂ ಕಾಮೆಂಟ್ ಮಾಡಿ ನಿಮ್ಮನ್ನು ಕೈಬಿಡಬಾರದು ಎಂದು ಬೆಂಬಲಿಸಿದ್ದಾರೆ.

ಟಿಕೆಟ್ ಕೈ ತಪ್ಪುವ ಭೀತಿ ನಡುವೆಯೇ ಫೇಸ್ ಬುಕ್ ಲೈವ್ ಬಂದಿದ್ದ ಪ್ರತಾಪ್ ಸಿಂಹ ಜನರಿಗೆ ಧನ್ಯವಾದ ಸಲ್ಲಿಸಿ ತಮ್ಮನ್ನು ಬೆಳೆಸಿದವರನ್ನು ನೆನೆಸುತ್ತಾ ಕಣ‍್ಣೀರು ಹಾಕಿದ್ದರು. ಪಕ್ಷದಲ್ಲಿ ಅವರ ಪರವಾಗಿ ಎಷ್ಟು ಜನ ಬ್ಯಾಟಿಂಗ್ ಮಾಡುತ್ತಿದ್ದಾರೋ ಇಲ್ಲವೋ ಆದರೆ ಅವರ ಕಟ್ಟಾ ಬೆಂಬಲಿಗರು ಮಾತ್ರ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಮಾಡಿಕೊಂಡು ಬೆಂಬಲ ನೀಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೆಲ್ಲ ದಲಿತ ಸಚಿವರ ಹೆಸರು ಕೆಡಿಸಲು ಪ್ರಯತ್ನ: ಡಿಕೆ ಶಿವಕುಮಾರ್

ವಲಸೆ ಬಂದ ಹಕ್ಕಿಗಳಿಗೆ ಹೀಗಾಗುವುದಾ, ಅಸ್ಸಾಂ ಜಿಲ್ಲೆಯಲ್ಲಿ ನಿಜವಾಗ್ಲೂ ಆಗಿದ್ದೇನು

ಹೆಂಡ್ತಿ ಜತೆ ರೋಮ್ಯಾಂಟಿಕ್ ರೀಲ್ ಮಾಡಲು ಹೋಗಿ ಸಂಕಷ್ಟ ತಂದುಕೊಂಡ ಪೊಲೀಸ್ ಅಧಿಕಾರಿ, ಆಗಿದ್ದೇನು ಗೊತ್ತಾ

ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿಕೆ ಶಿವಕುಮಾರ್, Video

ನಿಪಾ ವೈರಸ್ ಹರಡುವಿಕೆ: ಏಷ್ಯಾದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ

ಮುಂದಿನ ಸುದ್ದಿ
Show comments