Publish Date: Mon, 31 Aug 2020 (23:08 IST)
Updated Date: Mon, 31 Aug 2020 (23:10 IST)
ಹಿರಿಯ ರಾಜಕೀಯ ಮುತ್ಸದ್ದಿ, ಧೀಮಂತ ರಾಜಕೀಯ ನೇತಾರ, ಆರ್ಥಿಕ ಚಿಂತಕರೂ ಆಗಿದ್ದ ಮಾಜಿ ರಾಷ್ಟ್ರಪತಿಗಳಾದ ಭಾರತರತ್ನ ಪ್ರಣಬ್ ಮುಖರ್ಜಿ ಅಗಲಿಕೆಗೆ ಡಿಸಿಎಂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡು ಇಡೀ ದೇಶವೇ ದುಖಃದ ಮಡುವಿನಲ್ಲಿ ಮುಳುಗಿದೆ. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಗಳನ್ನು ಸಲ್ಲಿಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಅವರ ಸೇವೆ, ಸಾಧನೆಗಳು ಅಪರಿಮಿತ. ಹಲವು ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿ, ಕೇಂದ್ರ ಹಣಕಾಸು, ರಕ್ಷಣಾ, ವಾಣಿಜ್ಯ, ವಿದೇಶಾಂಗ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ರಾಷ್ಟ್ರಪತಿಗಳಾಗಿ ದೇಶದ ಹಿರಿಮೆಯನ್ನುಇಮ್ಮಡಿಗೊಳಿಸಿದ್ದಾರೆ ಎಂದಿದ್ದಾರೆ.