Webdunia - Bharat's app for daily news and videos

Install App

ತೀರ್ಪಿಗಾಗಿ ಕಾಯುತ್ತಿದ್ದ ಪ್ರಜ್ವಲ್ ರೇವಣ್ಣಗೆ ಶಾಕ್: ಕೋರ್ಟ್ ಹೇಳಿದ್ದೇನು

Krishnaveni K
ಬುಧವಾರ, 30 ಜುಲೈ 2025 (12:45 IST)
ಬೆಂಗಳೂರು: ಮನೆಗೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಇಂದು ತೀರ್ಪು ಪ್ರಕಟವಾಗುವುದನ್ನೇ ಎದಿರು ನೋಡುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಶಾಕ್ ಕೊಟ್ಟಿದೆ.

ಪ್ರಜ್ವಲ್ ರೇವಣ್ಣ ವಿರುದ್ಧದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಬೇಕಿತ್ತು. ಆದರೆ ಈಗ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪನ್ನು ಮತ್ತೆ ಎರಡು ದಿನಗಳಿಗೆ ಮುಂದೂಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಕೆಲವು ಸ್ಪಷ್ಟೀಕರಣ ಬೇಕಾಗಿದೆ. ಹೀಗಾಗಿ ತೀರ್ಪು  ಆಗಸ್ಟ್ 1 ಕ್ಕೆ ಪ್ರಕಟಿಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಇನ್ನು, ತೀರ್ಪಿಗಾಗಿ ಜೈಲಿನಲ್ಲಿ ಕಾಯುತ್ತಿದ್ದ ಪ್ರಜ್ವಲ್ ರೇವಣ್ಣ ಎದೆಬಡಿತ ಹೆಚ್ಚಾಗಿದೆ. ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಪ್ರಜ್ವಲ್ ಮೇಲಿದೆ. ಈ ಪ್ರಕರಣದ ವಿಚಾರಣೆ ಮುಗಿದಿದ್ದು ಶಿಕ್ಷೆ ಪ್ರಕಟವಾಗಬೇಕಿದೆ. ಇದಲ್ಲದೆ ಇನ್ನೂ ಮೂರು ಕೇಸ್ ಗಳು ಪ್ರಜ್ವಲ್ ವಿರುದ್ಧ ಇದ್ದು ಅವುಗಳ ವಿಚಾರಣೆ ಇನ್ನೂ ಮುಗಿದಿಲ್ಲ. ಈಗ ಮೊದಲ ಪ್ರಕರಣದ ತೀರ್ಪು ಏನಾಗುತ್ತದೆ ಎಂದು ನೋಡಲು ಶುಕ್ರವಾರದವರೆಗೆ ಕಾಯಬೇಕಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಪ್ರಜ್ವಲ್ ಖುಲಾಸೆಯಾದರೂ ಉಳಿದ ಪ್ರಕರಣಗಳಲ್ಲಿ ಜಾಮೀನು ಸಿಗದೇ ಇರುವುದರಿಂದ ಸದ್ಯಕ್ಕೆ ಅವರು ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಕೇಸ್: ಪೊಲೀಸರಿಗೂ ಸಂಕಷ್ಟ ತಂದಿಟ್ಟ ಎಸ್ಐಟಿ ಆರ್ಡರ್

Video: ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ

ಕೈಲಾಗದ ರಾಹುಲ್ ಗಾಂಧಿ ಮೈ ಪರಚಿಕೊಳ್ತಿದ್ದಾರೆ: ಆರ್ ಅಶೋಕ ವಾಗ್ದಾಳಿ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಸುದೀರ್ಘ ಜೀವನ ಗುಟ್ಟು ಇದುವೇ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments