Select Your Language

Notifications

webdunia
webdunia
webdunia
webdunia

ಕಜ್ಜಿ, ಕೆಮ್ಮು ಇರೋರೆಲ್ಲಾ ಇಲ್ಲಿದ್ದಾರೆ.. ನನ್ನ ಬೇರೆ ಸೆಲ್ ಗೆ ಹಾಕಿ: ಪ್ರಜ್ವಲ್ ರೇವಣ್ಣ ಬೇಡಿಕೆ

Prawal Revanna
ಬೆಂಗಳೂರು: ಕಜ್ಜಿ, ಕೆಮ್ಮು ಇರೋರೆಲ್ಲಾ ಇಲ್ಲಿದ್ದಾರೆ.. ನಂಗೆ ಇಲ್ಲಿ ಇರಲು ಆಗಲ್ಲ. ಬೇರೆ ಸೆಲ್ ಗೆ ವರ್ಗಾಯಿಸಿ ಎಂದು ಅತ್ಯಾಚಾರ ಅಪರಾಧಿ ಪ್ರಜ್ವಲ್ ರೇವಣ್ಣ ಬೇಡಿಕೆಯಿಟ್ಟಿದ್ದಾರೆ.

ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ತಮ್ಮ ಬ್ಯಾರಕ್ ನಲ್ಲಿ ಫೋನ್ ಬಳಸಿ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಅವರ ವಿಐಪಿ ಟ್ರೀಟ್ಮೆಂಟ್ ಗಳೆಲ್ಲವೂ ಬಂದ್ ಆಗಿತ್ತು.

ಇಬ್ಬರು ಕೈದಿಗಳಿದ್ದ ಸೆಲ್ ನಲ್ಲಿದ್ದ ಪ್ರಜ್ವಲ್ ರೇವಣ್ಣ ಈಗ 25 ಕೈದಿಗಳಿರುವ ಸಾಮಾನ್ಯ ಸೆಲ್ ಗೆ ವರ್ಗಾವಣೆಯಾಗಿದ್ದಾರೆ. ಇಷ್ಟು ದಿನ ಜೈಲಿನಲ್ಲಿದ್ದರೂ ವಿಐಪಿ ಟ್ರೀಟ್ಮೆಂಟ್ ಪಡೆಯುತ್ತಿದ್ದ ಪ್ರಜ್ವಲ್ ಈಗ ಸಾಮಾನ್ಯ ಕೈದಿಯಂತೆ ಕಾಲ ಕಳೆಯುತ್ತಿದ್ದಾರೆ.

ಒಂದೇ ಕೊಠಡಿಯಲ್ಲಿ 25 ಕೈದಿಗಳಿದ್ದು ಎಲ್ಲರಿಗೂ ಒಂದೇ ಶೌಚಾಲಯವಿದೆ. ಇವರಲ್ಲಿ ಕೆಲವರಿಗೆ ಕೆಮ್ಮು, ಕಜ್ಜಿ ರೋಗಗಳಿವೆ. ನನಗೂ ಈ ಸೋಂಕು ಹರಡಬಹುದು ಎಂಬ ಭಯವಿದೆ. ಹೀಗಾಗಿ ಬೇರೆ ಸೆಲ್ ಗೆ ವರ್ಗಾಯಿಸಿ ಎಂದು ಪ್ರಜ್ವಲ್ ದುಂಬಾಲು ಬಿದ್ದಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಆಗಲ್ಲ. ಮುಂದೆ ನೋಡೋಣ ಎಂದು ಜೈಲಾಧಿಕಾರಿಗಳು ಸಾಗ ಹಾಕಿದ್ದಾರೆ ಎಂದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ನಲ್ಲಿ ಬ್ಯುಸಿ… ಗಂಡನ ಬೈಕ್ ಬಿಟ್ಟು ಬೇರೆ ಯುವಕನ ಬೈಕ್ ಏರಿದ ಮಹಿಳೆ: ಮುಂದೇನಾಯ್ತು Funny video