Select Your Language

Notifications

webdunia
webdunia
webdunia
webdunia

ಪ್ರಜ್ವಲ್ ಎಲ್ಲಿಗಾದರೂ ಹೋಗಿದ್ದರು ಹಿಡಿದು ತರ್ತೀವಿ: ಸಿಎಂ ಸಿದ್ದರಾಮಯ್ಯ

Prajwal Revanna Pendrive Case

Sampriya

ಬಾಗಲಕೋಟೆ , ಶುಕ್ರವಾರ, 3 ಮೇ 2024 (18:33 IST)
ಬಾಗಲಕೋಟೆ: ಅಶ್ಲೀಲ ವಿಡಿಯೋ ಪ್ರಕರಣದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಹೋಗಿದ್ದರು ಹಿಡಿದು ಕರ್ಕೊಂಡು ಬರ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದರು.

ಬಾಗಲಕೋಟೆಯಲ್ಲಿ ಮಾಧ್ಯಮದವರು ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆಯೇ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ಎಲ್ಲಿಗಾದರೂ ಎಸ್ಕೇಪ್ ಆಗಿರಲಿ, ಯಾವುದೇ ದೇಶಕ್ಕೆ ಹೋಗಿರಲಿ, ಅಲ್ಲಿಂದ ಹಿಡಿದು ತರ್ತೀವಿ.

ಪ್ರಜ್ವಲ್ ರೇವಣ್ಣರ ಪಾಸ್‌ಪೋರ್ಟ್ ರದ್ದು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಈ ಸಂಬಂಧ ಈಗಾಗಲೇ ನಾವು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರವೇ ಪ್ರಜ್ವಲ್‌ಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.  

ಈ ಹಿಂದೆ ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಇದ್ದ ಹಾಗೆ. ನನ್ನ ಮಗ ಬೇರೆ ಅಲ್ಲ, ಪ್ರಜ್ವಲ್ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಅವರು ಎಲ್ಲಾ ಕುಕೃತ್ಯವನ್ನು ಒಟ್ಟಿಗೆ ಮಾಡ್ತಾರೆ, ಆಮೇಲೆ ನಾವಲ್ಲ ಅಂತಾರೆ ಎಂದು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಹೇಳಿಕೆ ತಿರುಚಿದ ವಿಡಿಯೋ: ಐವರಿಗೆ ಷರತ್ತು ಬದ್ಧ ಜಾಮೀನು