Pradeep Eshwar: ಮೋದಿ 11 ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರಿ: ಪ್ರದೀಪ್ ಈಶ್ವರ್

Krishnaveni K
ಗುರುವಾರ, 12 ಜೂನ್ 2025 (11:03 IST)
ಬೆಂಗಳೂರು: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷಗಳಾಗಿವೆ. ಈ 11 ವರ್ಷದಲ್ಲಿ ಅವರು ಭಾರೀ ಕಡಿದು ಕಟ್ಟೆ ಹಾಕಿದ್ದಾರೆ ಬಿಡ್ರೀ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ ಮಾಡಿದ್ದಾರೆ.

ಮೋದಿ ಸರ್ಕಾರಕ್ಕೆ 11 ವರ್ಷವಾಗಿರುವ ಹಿನ್ನಲೆಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ 11 ವರ್ಷಗಳಲ್ಲಿ ಮೋದಿಯವರು ಸಾಧನೆಗಳನ್ನು ಕಡಿದು ಕಟ್ಟೆಹಾಕಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ರೈತರು ವ್ಯವಸಾಯ ಮಾಡೋಣ ಎಂದು ಟ್ರ್ಯಾಕ್ಟರ್ ಮೇಲೆ 12% ಜಿಎಸ್ ಟಿ. ಸ್ವಲ್ಪ ದಿನ ಆದ ಮೇಲೆ  ಟೈರ್ ಕೆಟ್ಟು ಹೋದ್ರೆ ಅದರ ಮೇಲೆ 18% ಜಿಎಸ್ ಟಿ. ಅದೂ ಹಾಳಾಗಿ ಹೋದ್ರೆ ಟ್ರ್ಯಾಕ್ಟರ್ ಬಿಡಿ ಭಾಗಗಳ ಮೇಲೆ 28% ಜಿಎಸ್ ಟಿ ಹಾಕಿದ್ದಾರೆ. ಈಗ ಹೇಳಿ ಕೇಂದ್ರದ ಮೋದಿ ಸರ್ಕಾರ ರೈತ ವಿರೋಧಿ ಅಲ್ವಾ? ಇದೇ ಅವರ ಸಾಧನೆ ಎಂದು ವ್ಯಂಗ್ಯ ಮಾಡಿದ್ದಾರೆ.

ಎನ್ ಡಿಎ ಎಂದರೆ ದೇಶ ನಾಶ ಮಾಡುವ ಒಕ್ಕೂಟ. ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ. ರೈತರ ವಿಚಾರದಲ್ಲಿ ಫೇಲ್ ಆಗಿದೆ. ಕೇವಲ ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡೋದೊಂದೇ ಸಾಧನೆ ಎಂದಿದ್ದಾರೆ. ಆದರೆ ಇಂತಹ ದಾಳಿಗಳಿಗೆಲ್ಲಾ ಕಾಂಗ್ರೆಸ್ ನಾಯಕರು ಹೆದರಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡ್‌ನೈಟ್ ಹಂಚಿಕೊಂಡ ವಿಡಿಯೋಗೆ ಸಿಕ್ಕಾ ಪ್ರತಿಕ್ರಿಯೆಗೆ ಪ್ರಧಾನಿ ಮೋದಿ ಥ್ಯಾಂಕ್ಸ್‌

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು, ತಿಳಿದುಕೊಳ್ಳಬೇಕಾದ ಅಂಶ ಇಲ್ಲಿದೆ

NEET ಪ್ರಶ್ನೆಪತ್ರಿಕೆ ವಿವಾದ: 47ಅಧಿಕಾರಿಗಳ ವಜಾ, ಮಹತ್ವದ ಬೆಳವಣಿಗೆ

ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲು ನಿಜ ಕಾರಣವೇನು: ಶಾಕಿಂಗ್ ವಿಡಿಯೋ ಬಿಡುಗಡೆ ಮಾಡಿದ ದೆಹಲಿ ಪೊಲೀಸರು

ಟಾಟಾ ಸುಮೋ ಮೇಲೆ ಬಿದ್ದ ಬೃಹತ್ ಬಂಡೆಗಳು, 13ಮಂದಿ ಸಾವು

ಮುಂದಿನ ಸುದ್ದಿ
Show comments