Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ
bangalore , ಭಾನುವಾರ, 9 ಜನವರಿ 2022 (20:03 IST)
ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಗರದ ಹಲವೆಡೆ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ತಿಳಿಸಿದೆ.
ಇಂದು ಜೆಸಿ ಇಂಡಸ್ಟ್ರಿಯಲ್ ಲೇಔಟ್, ವಿಟ್ಟಲ್ ನಗರ, ಮಾರುತಿ ಲೇಔಟ್, ಜಯನಗರ, ಕುಮಾರಸ್ವಾಮಿ ಲೇಔಟ್, ಗುರಪಾನಪಾಳ್ಯ, ಎಚ್‌ಎಂಟಿ ಲೇಔಟ್, ನೆಲಗೇದರನಹಳ್ಳಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿಘ್ನೇಶ್ವರ ನಗರ, ವೀರಭದ್ರೇಶ್ವರ ನಗರ, ವೀರಭದ್ರೇಶ್ವರ ನಗರ, ವಿಜಯನಗರ, ಹೊಸಹಳ್ಳಿ, ಎಲ್‌ಐಸಿ ಕಾಲೋನಿ, ಕೆನರಾ ಬ್ಯಾಂಕ್ ಕಾಲೋನಿ, ಬಸವೇಶ್ವರನಗರ, ವೆಸ್ಟ್ ಆಫ್ ಚಾರ್ಡ್ ರೋಡ್, ಪ್ರಶಾಂತ ನಗರ, ಕೆಎಚ್‌ಬಿ ಕಾಲೋನಿ, ನಾಗರಭಾವಿ ಮುಖ್ಯರಸ್ತೆ, ಗಂಗೊಂಡನ ಹಳ್ಳಿ, ಚಂದ್ರಾ ಲೇಔಟ್, ಅತ್ತಿಗುಪ್ಪೆ ಮತ್ತು ಕಾಮಾಕ್ಷಿಪಾಳ್ಯ ಮಾರ್ಕೆಟ್​​ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜನವರಿ 10ರಂದು ಯೂನಿಟಿ ಬಿಲ್ಡಿಂಗ್, ಟೌನ್ ಹಾಲ್, ರವೀಂದ್ರ ಕಲಾಕ್ಷೇತ್ರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ನಗರ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಕಿಮ್ಸ್ ಕಾಲೇಜು ಸುತ್ತಮುತ್ತ, ಬನಶಂಕರಿ 2ನೇ ಹಂತ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ಪತ್ತೆಯಾದ ಕೋವಿಡ್‌ ಪ್ರಕರಣಗಳೆಷ್ಟು ಗೊತ್ತಾ..?