ಬೆಂಗಳೂರು: ಸೋಂಕಿತರ ಸಂಖ್ಯೆ ಮೂರಂಕಿಗೆ ಇಳಿಯಿತು ಎನ್ನುವಷ್ಟರಲ್ಲಿ ಒಮಿಕ್ರಾನ್ ಪ್ರಕರಣಗಳು ಕಂಡು ಬಂದಿದ್ದು, ವರ್ಷಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಕೋವಿಡ್ ಹಿನ್ನೆಲೆ ಕಳೆದ ವರ್ಷವೂ ಸಂಭ್ರಮದ ಆಚರಣೆಗೆ ತಡೆ ನೀಡಲಾಗಿತ್ತು. ಈ ವರ್ಷವೂ ನಿರ್ಬಂಧ ಹೇರುವ ಸಾಧ್ಯತೆ ಇದೆ. ಈ ಸಂಬಂಧ ಸಚಿವ ಸಂಪುಟದ ಸಭೆಯಲ್ಲಿ ಕೆಲವೊಂದಿಷ್ಟು ನಿರ್ಣಯಗಳನ್ನು ತಗೆದುಕೊಂಡಿದ್ದು ಹೊಸ ವರ್ಷಾಚರಣೆ ಮತ್ತು ಕ್ರೀಸ್ ಮಸ್ ಹಬ್ಬದ ಆಚರಣೆಗೆ ಬ್ರೇಕ್ ಹಾಕಲು ಒಮ್ಮತದ ಅಭಿಪ್ರಾಯ ಕೇಳಿ ಬಂದಿದೆ ಎನ್ನಲಾಗಿದೆ.
ಕೊರೋನಾ ನಿಯಂತ್ರಣದ ಹಿನ್ನಲೆ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದ್ದು, ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ತಡೆಗಟ್ಟಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿದೆ.
ಹೊಸ ವರ್ಷಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಒಂದು ವೇಳೆ ಸೋಂಕು ಹರಡಿದರೆ, ಸರಪಳಿಯಂತೆ ಹಬ್ಬುವ ಮೂಲಕ ಲಾಕ್ ಡೌನ್ ಇಲ್ಲವೇ ನೈಟ್ ಕಫ್ಯೂ ಸೇರಿ ಕೆಲ ನಿರ್ಬಂಧಗಳನ್ನು ಅನಿವಾರ್ಯವಾಗಿ ಹೇರಬೇಕಾಗುತ್ತದೆ. ಆದ್ದರಿಂದ ಹೊಸ ವರ್ಷಾಚರಣೆ ಗೆ ಬ್ರೇಕ್ ಹಾಕಲು ಚರ್ಚೆಗಳು ನಡೆಯುತ್ತಿವೆ.