Select Your Language

Notifications

webdunia
webdunia
webdunia
webdunia

ಸರ್ಕಾರ ಸೇವಾನಿರತ ವೈದ್ಯರು 2019-20 ನೇ ಶೈಕ್ಷಣಿಕ ಡಿಪ್ಲೋಮಾ ಪ್ರವೇಶ ಅಧಿಸೂಚನೆ ರದ್ದು

ಸರ್ಕಾರ ಸೇವಾನಿರತ ವೈದ್ಯರು 2019-20 ನೇ ಶೈಕ್ಷಣಿಕ ಡಿಪ್ಲೋಮಾ ಪ್ರವೇಶ ಅಧಿಸೂಚನೆ ರದ್ದು
bangalore , ಶನಿವಾರ, 4 ಡಿಸೆಂಬರ್ 2021 (19:36 IST)
ಬೆಂಗಳೂರು: ಸರ್ಕಾರಿ ಸೇವಾನಿರತ ವೈದ್ಯರು 2019-20ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ವೈದ್ಯಕೀಯ ಡಿಪ್ಲೋಮಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಕೃಪಾಂಕ ನೀಡಲು ಮಾನದಂಡಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ 2019ರ ಮಾ.8ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಪಡಿಸಿದೆ.
ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಡಾ. ಪ್ರೀತಿ ಜಿ. ರಾಥೋಡ್ ಹಾಗೂ ಇತರ ಸೇವಾನಿರತ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ - ಪ್ರತಿವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ 2019ರ ಮಾ.8ರಂದು ಹೊರಡಿಸಿರುವ ಅಧಿಸೂಚನೆಯು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಇದರ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಗಳು - 2000ರ ಸೆಕ್ಷನ್ 9(4)ಗೆ ವಿರುದ್ಧವಾಗಿದೆ ಎಂದು ತಿಳಿಸಿ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶ ಮತ್ತು ಓಡಿಶಾದಲ್ಲಿ ಇಂದು ಚಂಡಮಾರುತದ ಆರ್ಭಟ