Select Your Language

Notifications

webdunia
webdunia
webdunia
webdunia

ದೇವಾಲಯದ ಪಕ್ಕದಲ್ಲಿಯೇ ರಷ್ಯಾ ಯುವತಿಯೊಂದಿಗೆ ಅರ್ಚಕ ಸೆಕ್ಸ್

ದೇವಾಲಯದ ಪಕ್ಕದಲ್ಲಿಯೇ ರಷ್ಯಾ ಯುವತಿಯೊಂದಿಗೆ ಅರ್ಚಕ ಸೆಕ್ಸ್
ಹಂಪಿ , ಶನಿವಾರ, 4 ನವೆಂಬರ್ 2017 (14:37 IST)
ವಜ್ರವೈಡೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಖ್ಯಾತಿಯ ವಿಜಯನಗರ ಸಾಮ್ರಾಜ್ಯದ ಹಂಪಿ ಉತ್ಸವ ಒಂದು ಕಡೆ ಜೋರಾಗಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ದೇವಾಲಯದ ಪಕ್ಕದಲ್ಲಿಯೇ ಪೂಜಾರಿ ರಷ್ಯಾ ಯುವತಿಯೊಂದಿಗೆ  ಸೆಕ್ಸ್‌ನಲ್ಲಿ ತೊಡಗಿದ್ದಾಗ ಸಿಕ್ಕುಬಿದ್ದ ಹೇಯ ಘಟನೆ ವರದಿಯಾಗಿದೆ.
ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವವನ್ನು ಸಂಭ್ರಮದಿಂದ ಆಚರಿಸುವ ಬದಲಿಗೆ ದೇವಾಲಯದ ಅರ್ಚಕ ರಾಜಮೋಹನ್‌ ರಷ್ಯಾ ಯುವತಿಯೊಂದಿಗೆ ಸೆಕ್ಸ್ ಸುಖ ಅನುಭವಿಸುತ್ತಿರುವಾಗ ಪೊಲೀಸರ ಅತಿಥಿಯಾಗಿದ್ದಾನೆ.
 
ಹಂಪಿಯ ಪ್ರಖ್ಯಾತ ಆಂಜನೇಯ ದೇವಾಲಯದ ಬಳಿ ರಾಜಮೋಹನ್‌,  ರಷ್ಯಾ ಯುವತಿಯೊಬ್ಬಳೊಂದಿಗೆ ಬಹಿರಂಗವಾಗಿಯೇ ಸೆಕ್ಸ್‌ನಲ್ಲಿ ತೊಡಗಿದ್ದರು. ಸ್ಥಳೀಯರು ಪ್ರಶ್ನಿಸಿದರೂ ಕ್ಯಾರೆ ಎನ್ನದೇ ತಮ್ಮ ಕಾಯಕದಲ್ಲಿ ಮುಂದುವರಿದಿದ್ದರು ಎನ್ನಲಾಗಿದೆ. ಆದರೆ, ಸ್ಥಳೀಯರು ಜೋರಾಗಿ ಕಿರುಚಿದಾಗ ಕೋಪಗೊಂಡ ಅರ್ಚಕ ರಾಜಮೋಹನ್, ಅವರ ಮೇಲೆ ಹಲ್ಲೆಗೆ ಮುಂದಾದ. ನಂತರ ಪೊಲೀಸರು ಅರ್ಚಕನನ್ನು ಬಂಧಿಸಿ ಕೃಷ್ಣನ ಜನ್ಮಸ್ಥಾನಕ್ಕೆ ತಳ್ಳಿದ್ದಾರೆ.
 
ಸ್ಥಳೀಯರು ಅರ್ಚಕ ರಾಜಮೋಹನ್ ಮತ್ತು ರಷ್ಯಾದ ಯುವತಿಯ ಮೇಲೆ ಹಲ್ಲೆ ಮಾಡಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಳೆನಷ್ಟ ಬಗ್ಗೆ ಪಿಎಂ, ಸಿಎಂ ಕಡೆಯಿಂದ ಉತ್ತರವೇ ಬಂದಿಲ್ಲ: ದೇವೇಗೌಡ