Publish Date: Sat, 12 Aug 2017 (15:59 IST)
Updated Date: Sat, 12 Aug 2017 (17:44 IST)
ಉಪೇಂದ್ರ ಅವರು ಅಂದುಕೊಂಡಂತೆ ರಾಜಕೀಯ ನಡೆಸುವುದು ಸಾಧ್ಯವಿಲ್ಲ. ಸಿನಿಮಾದಿಂದ ನಿವೃತ್ತರಾಗುತ್ತಿರುವ ಉಪೇಂದ್ರ ರಾಜಕೀಯಕ್ಕೆ ಬರುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಉಪೇಂದ್ರ ಅವರು ಏನಾದರೂ ಕಾರ್ಯಕ್ರಮ ಮಾಡಿ ಬಡವರಿಗೆ ಸಹಾಯ ಮಾಡಿ ರಾಜಕೀಯಕ್ಕೆ ಬರುವುದಿದ್ದರೆ ಓಕೆ ಎನ್ನಬಹುದಿತ್ತು. ಅಂಥದ್ದೇನಾದರೂ ಮಾಡಿದ್ದಾರಾ ಎಂದು ಜಮೀರ್ ಅಹಮ್ಮದ್ ಪ್ರಶ್ನಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ನಟ ಉಪೇಂದ್ರ ಜನಸೇವೆ ಮಾಡಲು ಬರುತ್ತಿರುವುದಕ್ಕೆ ನಮ್ಮ ಸ್ವಾಗತವಿದೆ. ಇಷ್ಟು ದಿನ ಬಣ್ಣ ಹಚ್ಚಿ ಸಿನಿಮಾ ಮಾಡುತ್ತಿದ್ದರು. ಈಗ ಬಣ್ಣ ಹಚ್ಚದೇ ರಾಜಕೀಯ ಮಾಡಲಿ. ಅವರು ರಾಜಕೀಯ ಎಂಟ್ರಿಗೆ ನಾವು ಶುಭ ಕೋರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜಾತ್ಯಾತೀತವಾಗಿ ರಾಜಕಾರಣ ಮಾಡುವುದಕ್ಕೆ ಸ್ವಾಗತ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ