Select Your Language

Notifications

webdunia
webdunia
webdunia
webdunia

ಪೊಲೀಸರ ಭರ್ಜರಿ ಕಾರ್ಯಾಚರಣೆ: ಖತರ್ನಾಕ್ ಕಳ್ಳನ ಬಂಧನ

ಪೊಲೀಸರ ಭರ್ಜರಿ ಕಾರ್ಯಾಚರಣೆ: ಖತರ್ನಾಕ್ ಕಳ್ಳನ ಬಂಧನ
ಮಂಡ್ಯ , ಮಂಗಳವಾರ, 11 ಸೆಪ್ಟಂಬರ್ 2018 (19:30 IST)
45 ಸುಲಿಗೆ ಪ್ರಕರಣಗಳಲ್ಲಿ ಬೇಕಿದ್ದ ಖತರ್ನಾಕ್ ಕಳ್ಳನ ಬಂಧನ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಐವತ್ತು ಲಕ್ಷ ಮೌಲ್ಯದ ಒಂದು ಕೆಜಿ ಆರುನೂರ ಇಪ್ಪತ್ತೊಂದು ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

ನಾಗಮಂಗಲ ವೃತ್ತ ವ್ಯಾಪ್ತಿಯ ಬೆಳ್ಳೂರು ಪೊಲೀಸರಿಂದ ಬಂಧನವಾಗಿದೆ. ಸೋಮಶೇಖರ್(34) ಬಂಧಿತ ಆರೋಪಿಯಾಗಿದ್ದಾನೆ.

ಸೋಮ @ ಸೋಮಶೇಖರಾಚಾರಿ @ ಸೂರ್ಯ @ ಸುರೇಶ @ ನಾಗರಾಜ @ ಲೋಕೇಶ್
ಹೀಗೆ ಹಲವು ಹೆಸರುಗಳಿಂದ ಗುರುತಿಸಿಕೊಂಡಿದ್ದ ಕಳ್ಳ ಖತರ್ನಾಕ್ ಕೆಲಸ ಮಾಡುತ್ತಿದ್ದನು.
ಮಂಡ್ಯ, ತುಮಕೂರು, ರಾಮನಗರ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಒಂಟಿ ಮಹಿಳೆಯರನ್ನು ವಂಚಿಸಿ ಕಳ್ಳತನ ಮಾಡುತ್ತಿದ್ದ.

ನಾಗಮಂಗಲ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಧನರಾಜ್, ಪಿಎಸ್ಐ ಶರತ್‌ಕುಮಾರ್ ತಂಡದಿಂದ ಬಂಧನ ಮಾಡಲಾಗಿದೆ. ಕಾರ್ಯಾಚರಣೆ ತಂಡಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮದವರಿಗೆ ಅವಮಾನಿಸಿದ ಕಾರ್ಮಿಕ ಸಚಿವ