Publish Date: Tue, 13 Sep 2022 (15:51 IST)
Updated Date: Tue, 13 Sep 2022 (15:54 IST)
ಖಾಕಿ ತೊಟ್ಟವರೆಲ್ಲರೂ ಧಿಮಾಕ್‌ನಿಂದ ವರ್ತಿಸುತ್ತಾರೆ ಎಂದೇ ನಾವು ಭಾವಿಸುತ್ತೇವೆ. ರೈಲು ನಿರ್ವಾಹಕರು, ಬಸ್ ಚಾಲಕ ನಿರ್ವಾಹಕರು, ಭದ್ರತಾ ಸಿಬ್ಬಂದಿಗಳು, ಆರಕ್ಷಕರು ಹೀಗೆ ಖಾಕಿ ತೊಟ್ಟವರೆಲ್ಲರೂ ದರ್ಪದಿಂದ ಜನರೊಂದಿಗೆ ವರ್ತಿಸುವುದಿಲ್ಲ ಅವರಲ್ಲಿ ಕೂಡ ಎಷ್ಟೊ ಜನರು ಕರುಣೆಯಿಂದ ವರ್ತಿಸುವವರಿರುತ್ತಾರೆ. ಯಾವುದೇ ಪ್ರಚಾರ ನಿರ್ದೇಶನಗಳಿಲ್ಲದೆಯೇ ಇವರೆಲ್ಲರೂ ಸಹಾಯ ಮಾಡುತ್ತಾರೆ ಅಂತೆಯೇ ಯಾವುದೇ ಅಪೇಕ್ಷೆಗಳಿಲ್ಲದೆಯೇ ಜನರನ್ನು ಪ್ರೀತಿಸುತ್ತಾರೆ ಮತ್ತು ಅವರ ನೆರವಿಗೆ ಧಾವಿಸುತ್ತಾರೆ
ರೈಲ್ವೇಯ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಗಾಲಿಕುರ್ಚಿಯಲ್ಲಿದ್ದ 19 ರ ಹರೆಯದ ಹುಡುಗನಿಗೆ ದೇವತಾ ಪುರುಷರಂತೆ ಆಗಮಿಸಿ ರೈಲು ಹತ್ತಲು ಸಹಾಯ ಮಾಡಿದ್ದಾರೆ. ತಾನೊಬ್ಬ ರೈಲ್ವೇ ಅಧಿಕಾರಿ ಎಂಬ ಜಂಭವನ್ನು ತೋರಿಸಿದೆಯೇ ಈ ಅಧಿಕಾರಿ ಗಾಲಿ ಕುರ್ಚಿಯಲ್ಲಿದ್ದ ಹುಡುಗನ ನೆರವಿಗೆ ಧಾವಿಸಿದ್ದಾರೆ.
ರಾತ್ರಿ ಸಮಯದಲ್ಲಿ ತಮಿಳುನಾಡಿ ರೈಲು ಏರಲು ಆಗದೆ ಶಿವಕುಮಾರ್ ಹಾಗೂ ಆತನ ಅಜ್ಜಿ ಕಂಗೆಟ್ಟಿದ್ದ ಸಮಯದಲ್ಲಿ ಸರವಣನ್ ಯಾರ ನಿರ್ದೇಶನವೂ ಇಲ್ಲದೆ ಹುಡುಗನ ಸಹಾಯಕ್ಕೆ ಬಂದಿದ್ದಾರೆ. ಗಾಲಿ ಕುರ್ಚಿಯಿಂದ ಶಿವಕುಮಾರ್‌ನನ್ನು ನಿಧಾನಕ್ಕೆ ಎಬ್ಬಿಸಿದ ಸರವಣನ್ ನಂತರ ಹುಡುಗನನ್ನು ಎತ್ತಿಕೊಂಡೇ ಸೀಟ್ ಮೇಲೆ ಮಲಗಿಸುತ್ತಾರೆ.