Publish Date: Sun, 25 Mar 2018 (10:37 IST)
Updated Date: Sun, 25 Mar 2018 (10:40 IST)
ಬೆಂಗಳೂರು: ಖಾಸಗಿ ಸಂಸ್ಥೆಯೊಂದು ನೀಡಿದ ನಮ್ಮ ಬೆಂಗಳೂರು ಅವಾರ್ಡ್ ಸ್ವೀಕರಿಸಲು ಪೊಲೀಸ್ ಅಧಿಕಾರಿ ಐಜಿಪಿ ರೂಪಾ ನಿರಾಕರಿಸಿದ್ದಾರೆ.
ನಮ್ಮ ಬೆಂಗಳೂರು ಫೌಂಡೇಶನ್ ಎಂಬ ಖಾಸಗಿ ಸಂಸ್ಥೆ ಈ ಪ್ರಶಸ್ತಿಗೆ ರೂಪಾ ಅವರನ್ನು ಆಯ್ಕೆ ಮಾಡಿತ್ತು. ಆದರೆ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಬಯಲಿಗೆಳೆದ ಹೆಮ್ಮೆಯ ಪೊಲೀಸ್ ಅಧಿಕಾರಿ ಈ ಪ್ರಶಸ್ತಿ ಸ್ವೀಕರಿಸಲ್ಲ ಎಂದಿದ್ದಾರೆ.
‘ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಪ್ರಶಸ್ತಿ ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಈ ಪ್ರಶಸ್ತಿ ಜತೆಗೆ ಭಾರೀ ಮೊತ್ತದ ನಗದು ಬಹುಮಾನವಿರುವ ಕಾರಣಕ್ಕೆ ಪ್ರಶಸ್ತಿ ಸ್ವೀಕರಿಸಲ್ಲ. ಎಲ್ಲಾ ಸರ್ಕಾರಿ ಅಧಿಕಾರಿಗಳೂ ಇಂತಹ ಸಂಘಟನೆಗಳಿಂದ ಸ್ವಲ್ಪ ದೂರವೇ ಇರುವುದು ಅಥವಾ ತಟಸ್ಥವಾಗಿರುವುದು ಒಳ್ಳೆಯದು ಎಂಬ ಕಾರಣಕ್ಕೆ ಪ್ರಶಸ್ತಿ ಸ್ವೀಕರಿಸಲ್ಲ’ ಎಂದು ರೂಪಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ