Select Your Language

Notifications

webdunia
webdunia
webdunia
webdunia

ಮಸೀದಿ ಮುಂದೆ ಗಣೇಶ ಮೂರ್ತಿ ಮೆರವಣಿಗೆ ಮಾಡಬೇಡಿ ಎಂದ ಪೊಲೀಸರು: ರಸ್ತೆಯಲ್ಲೇ ಅನಾಥವಾದ ಗಣೇಶ

Ganesha Festival

Krishnaveni K

ಬೆಳಗಾವಿ , ಬುಧವಾರ, 18 ಸೆಪ್ಟಂಬರ್ 2024 (13:09 IST)
Photo Credit: X
Photo: ಸಾಂದರ್ಭಿಕ ಚಿತ್ರ X

ಬೆಳಗಾವಿ: ನಾಗಮಂಗಲದಲ್ಲಿ ಇತ್ತೀಚೆಗೆ ಗಲಭೆ ನಡೆದ ಬೆನ್ನಲ್ಲೇ ಇಂದು ಬೆಳಗಾವಿಯಲ್ಲಿ ಗಣೇಶನ ಮೂರ್ತಿ ಮೆರವಣಿಗೆ ವಿಚಾರದಲ್ಲಿ ಪೊಲೀಸರು ಮತ್ತು ಗಣೇಶ ಸಮಿತಿ ಸದಸ್ಯರ ನಡುವೆ ಕಿರಕ್ ನಡೆದಿದೆ.

ಇಂದು ಬೆಳಿಗ್ಗೆ ಮಾರ್ಕೆಟ್ ಮಾರ್ಗವಾಗಿ ಮಸೀದಿ ಮುಂದೆ ಗಣೇಶ ಮೂರ್ತಿ ವಿಸರ್ಜನೆಗೆ ಹಿಂದೂ ಕಾರ್ಯಕರ್ತರು ತಯಾರಿ ನಡೆಸಿಕೊಂಡಿದ್ದರು. ಆದರೆ ರಸ್ತೆ ನಡುವೆಯೇ ಅವರನ್ನು ತಡೆದು ನಿಲ್ಲಿಸಿದ ಪೊಲೀಸರು ಮಸೀದಿ ಮಾರ್ಗವಾಗಿ ತೆರಳದಂತೆ ಸೂಚಿಸಿದ್ದಾರೆ.

ಇದು ಮೆರವಣಿಗೆ ಸಾಗುತ್ತಿದ್ದವರನ್ನು ಕೆರಳಿಸಿದ್ದು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಪ್ರತೀ ವರ್ಷ ನಾವು ಮಸೀದಿ ಮಾರ್ಗವಾಗಿಯೇ ಮೆರವಣಿಗೆ ಹೋಗುತ್ತೇವೆ. ಈ ಬಾರಿಯೂ ಅದೇ ಮಾರ್ಗವಾಗಿ ಮೆರವಣಿಗೆ ಹೋಗಲು ಅವಕಾಶ ಕೊಡಿ ಎಂದು ಮೆರವಣಿಗೆ ಸಾಗುತ್ತಿದ್ದವರು ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಪೊಲೀಸರು ಒಪ್ಪಿಲಿಲ್ಲ.

ಇತ್ತ ಜಿದ್ದಿಗೆ ಬಿದ್ದ ಗಣೇಶ ಸಮಿತಿಯ ಸದಸ್ಯರು ರಸ್ತೆ ಮಧ್ಯದಲ್ಲೇ ಗಣೇಶನ ಮೂರ್ತಿಯನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮತ್ತು ಗಣೇಶ ಸಮಿತಿ ಸದಸ್ಯರ ನಡುವಿನ ಕಿರಿಕ್ ನಿಂದಾಗಿ ಗಣೇಶ ಅನಾಥವಾಗಿ ರಸ್ತೆ ಮಧ್ಯೆ ನಿಲ್ಲುವಂತಾಯಿತು. ಇತ್ತೀಚೆಗೆ ನಾಗಮಂಗಲದಲ್ಲಿ ಮಸೀದಿ ಮಾರ್ಗವಾಗಿ ಗಣೇಶ ಮೆರವಣಿಗೆ ಹೋಗುವ ಸಂದರ್ಭ ನಡೆದ ಕೋಮುಗಲಭೆಯ ಕಾರಣಕ್ಕೆ ಇಂದು ಪೊಲೀಸರು ಬೆಳಗಾವಿಯಲ್ಲಿ ಮಸೀದಿ ಮುಂದೆ ಮರವಣಿಗೆ ಮಾಡಲು ಅವಕಾಶ ನೀಡಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಹುಟ್ಟಿದ್ದು ಮುಸ್ಲಿಮರಿಗಾ, ಕ್ರಿಶ್ಚಿಯನ್ನರಿಗಾ: ಬಸನಗೌಡ ಯತ್ನಾಳ್ ವಿರುದ್ಧ ದೂರು