Publish Date: Tue, 09 Aug 2022 (18:30 IST)
Updated Date: Tue, 09 Aug 2022 (18:35 IST)
ಈದ್ಗಾ ಮೈದಾನದಲ್ಲಿ ಆಗಸ್ಟ್-15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗುತ್ತದೆ.ಇನ್ನು ಇದೇ ವಿಷಯವಾಗಿ ಚಾಮರಾಜಪೇಟೆ ನಾಗರೀಕ ಒಕ್ಕೂಟದ ಜೊತೆ ಇಂದು ಸಂಜೆ 4-30 ಕ್ಕೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆಯಲಿದೆ.
ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸಭೆಗೆ ಆಗಮಿಸಬೇಕೆಂದು ಪೊಲೀಸರು ನೋಟಿಸ್ ಕೂಡ ನೀಡಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂಬಂಧ ಚರ್ಚೆ ನಡೆಸಲು ಚಾಮರಾಜಪೇಟೆ ಪೊಲೀಸ್ ರಿಂದ ಮುನ್ನೆಚ್ಚರಿಕೆಯಾಗಿ ಸಭೆಯನ್ನ ನಡೆಸಲು ತೀರ್ಮಾನಿಸಲಾಗಿದೆ.