Select Your Language

Notifications

webdunia
webdunia
webdunia
Sunday, 13 April 2025
webdunia

ಫಾರಿನ್ ಮಾಡೆಲ್‍ಗಳಿಗೆ ಪೊಲೀಸ್ ನೋಟಿಸ್!

ಪೊಲೀಸ್
ಬೆಂಗಳೂರು , ಸೋಮವಾರ, 20 ಜೂನ್ 2022 (10:55 IST)
ಬೆಂಗಳೂರು : ಹಲಸೂರಿನ ಸ್ಟಾರ್ ಹೋಟೆಲ್ನಲ್ಲಿ ನಡೆದ ರೇವ್ ಪಾರ್ಟಿಯ ಫಾರಿನ್ ಮಾಡೆಲ್ಗಳಿಗೆ ನೋಟಿಸ್ ಜಾರಿಯಾಗಿದೆ.

ಕೆಲವರ ವೀಸಾ ಅವಧಿ ಮುಗಿದಿದ್ದರೆ, ಮತ್ತೆ ಕೆಲ ಮಾಡೆಲ್ಗಳ ವ್ಯವಹಾರದ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.

ಹಲಸೂರಿನ ದಿ ಪಾರ್ಕ್ ಹೊಟೇಲ್ನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಕೇಸ್ನಲ್ಲಿ ದೊಡ್ಡ, ದೊಡ್ಡ ಮಾಡೆಲ್ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ಸ್ ಬಂದಿದ್ದಾದರೂ ಹೇಗೆ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದು ಕೂಡ ಪೊಲೀಸರಿಗೆ ತಲೆನೋವು ತಂದಿದೆ. 150 ಜನರಿದ್ದ ಪಾರ್ಟಿಗೆ ಡ್ರಗ್ಸ್ ತಂದವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಗೆಸ್ಟ್ ಲಿಸ್ಟ್ ಪಡೆದಿದ್ದಾರೆ.

ಗೆಸ್ಟ್ ಲಿಸ್ಟ್ನಲ್ಲಿರುವ ಫಾರಿನ್ ಮಾಡೆಲ್ಸ್ ಹಾಗೂ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸುಮಾರು 40 ಮಂದಿ ಮಾಡೆಲ್ಸ್ಗಳಿಗೆ ನೋಟಿಸ್ ನೀಡಿರುವ ಹಲಸೂರು ಪೊಲೀಸರು, ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮಹಿಳೆಯರು 16 ವರ್ಷಕ್ಕೇ ಮದುವೆಯಾಗಬಹುದು: ಕೋರ್ಟ್ ತೀರ್ಪು