Publish Date: Mon, 19 Dec 2022 (19:08 IST)
Updated Date: Mon, 19 Dec 2022 (19:24 IST)
ನನ್ನನ್ನು ಯಾವುದೇ ಕಳ್ಳತನದ ಕೇಸ್ನಲ್ಲಿ ಪೊಲೀಸರು ಅರೆಸ್ಟ್ ಮಾಡಿಲ್ಲ. ನನಗೆ ಎರಡನೇ ಮದುವೆ ಕೂಡ ಆಗಿಲ್ಲ ಎಂದು ಪ್ರಸಿದ್ಧ ಚಿನ್ನದ ವ್ಯಾಪಾರಿ ಅಟ್ಟಿಕಾ ಗೋಲ್ಡ್ ಮಾಲೀಕರಾದ ಅಟ್ಟಿಕಾ ಬಾಬು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಅಣ್ಣನ ಮಗನನ್ನು ನಾನೇ ಸಾಕಿಕೊಂಡಿದ್ದೆ. ಅವನನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆ ಮಾಡಿಕೊಟ್ಟಿದ್ದೆ. ಹೆಂಡತಿ ಮನೆಯಲ್ಲಿ ವಾಸವಾಗಿದ್ದ, ಆದರೆ ಅವರ ಕುಟುಂಬದಲ್ಲಿ ಗಲಾಟೆ ಆಗಿದೆ. ಆಗ ಅಣ್ಣನ ಮಗನ ಹೆಂಡತಿ ವರದಕ್ಷಿಣೆ ಕಿರುಕುಳ ಕೇಸ್ ಹಾಕಿದ್ಲು. ಅದರಲ್ಲಿ ನನ್ನ ಮತ್ತು ನನ್ನ ಕುಟುಂಬದ ಹೆಸರು ಕೂಡ ಸೇರಿಸಿದ್ದಾರೆ. ಹಾಗಾಗಿ ಪೊಲೀಸರು ಬಂದು ನೋಟಿಸ್ಗೆ ಉತ್ತರ ನೀಡಲು ಹೇಳಿದ್ದರು. ಈ ಕಾರಣಕ್ಕೆ ನಾನು ಆಂಧ್ರಪ್ರದೇಶಕ್ಕೆ ಹೋಗಿದ್ದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಕೇಸ್ ಕೂಡ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.