ಬೀದಿ ವ್ಯಾಪಾರಿಗಳ ಜೊತೆ ಪೊಲೀಸ್ ಪೇದೆ ಅಸಭ್ಯ ವರ್ತನೆ

Webdunia
ಶನಿವಾರ, 6 ಆಗಸ್ಟ್ 2022 (14:39 IST)
ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಸ್ತೆ ಬದಿ ವ್ಯಾಪಾರಿ ಮಾಡುತ್ತಿದ್ದ ಬಡವರಿಂದ ಮಾಮೂಲಿ ವಸೂಲಿ ಮಾಡಲು ಮುಂದಾದ ಪೊಲೀಸ್‌ ಪೇದೆಯೊಬ್ಬರು ಇದನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿಕೊಳ್ಳುವಾಗ ಪ್ಯಾಂಟ್‌ ಜಿಪ್‌ ತೋರಿಸಿ ಅಶ್ಲೀಲ ವರ್ತನೆ ತೋರಿರುವ ಘಟನೆ ನಡೆದಿದೆ.
ಹೂವಿನ ವ್ಯಾಪಾರಿಗಳ ಬಳಿ ಬಂದ ಈ ಪೇದೆ ಮಾಮೂಲಿ ಕೇಳಿದ್ದು, ಕೊಡಲು ನಿರಾಕರಿಸಿದಾಗ ವ್ಯಾಪಾರ ಸಾಮಗ್ರಿಗಳನ್ನು ಕಾಲಿನಿಂದ ಒದ್ದು ದುರ್ವರ್ತನೆ ತೋರಿದ್ದಾರೆ. ಅಲ್ಲದೇ ವ್ಯಾಪಾರ ಮಾಡದಂತೆ ಬಡ ವ್ಯಾಪಾರಿಗಳಿಗೆ ತಾಕೀತು ಮಾಡಿದ್ದಾರೆ.
 
ಈ ವೇಳೆ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ ತೆಗೆದು ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಲು ಮುಂದಾಗಿದ್ದು, ಇದನ್ನು ಗಮನಿಸಿದ ಪೇದೆ ಅವರ ಬಳಿ ಬಂದು ವಿಡಿಯೋ ಮಾಡ್ತಿಯೇನೋ ಮಾಡಿಕೋ ಎಂದು ಹೇಳಿ ತಮ್ಮ ಪ್ಯಾಂಟ್‌ ಜಿಪ್‌ ತೆಗೆಯಲು ಮುಂದಾಗಿದ್ದಾರೆ. ಇದೀಗ ಸಾರ್ವಜನಿಕರೊಬ್ಬರು ಕೆ.ಆರ್. ಎಸ್.‌ ಪಕ್ಷದ ಪದಾಧಿಕಾರಿಗಳಿಗೆ ವಿಡಿಯೋ ಕಳುಹಿಸಿದ್ದು, ದುರ್ವರ್ತನೆ ತೋರಿದ ಪೇದೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊನ್ನೆ ಮೊನ್ನೆಯಷ್ಟೇ ದರ ಏರಿಕೆಗೆ ಬೆಚ್ಚಿದ್ದ ಮೆಟ್ರೋ ಪ್ರಯಾಣಿಕರಿಗೆ ಮತ್ತೇ ಶಾಕ್‌

ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ: ತಲೆ ಮರೆಸಿಕೊಂಡಿರುವ ರಾಜೀವ್‌ ಗೌಡ ಕೋರ್ಟ್‌ ಮೆಟ್ಟಿಲೇರಿದ್ದೇಕೆ

ಶಬರಿಮಲೆ ಚಿನ್ನದ ಕಳ್ಳತನ ತನಿಖೆ: ಮಹತ್ವದ ಬೆಳವಣಿಗೆ

ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ವಿರಾಟ್‌, ಕುಲದೀಪ್ ಭೇಟಿ

ಕಾಂಗ್ರೆಸ್ಸಿನ ಬಳ್ಳಾರಿ ಜಿಲ್ಲೆಯ ನಾಯಕರ ಕುರ್ಚಿ ಅಲ್ಲಾಡತೊಡಗಿದೆ: ಬಸವರಾಜ ಬೊಮ್ಮಾಯಿ

ಮುಂದಿನ ಸುದ್ದಿ
Show comments