Webdunia - Bharat's app for daily news and videos

Install App

ಬಡ ವಿದ್ಯಾರ್ಥಿಗಳಿಗಾಗಿ ಪಿಎಂ ವಿದ್ಯಾಲಕ್ಷ್ಮಿ ಯೋಜನೆ: ಬಡ್ಡಿ ರಹಿತ ಸಾಲ ಪಡೆಯಲು ಇಲ್ಲಿದೆ ಮಾರ್ಗ

Krishnaveni K
ಗುರುವಾರ, 7 ನವೆಂಬರ್ 2024 (10:34 IST)
ನವದೆಹಲಿ: ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಕೇಂದ್ರ ಸರ್ಕಾರ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಬಡ ವಿದ್ಯಾರ್ಥಿಗಳ ಓದಿಗೆ ಬಡ್ಡಿ ರಹಿತವಾಗಿ 10 ಲಕ್ಷ ರೂ.ವರೆಗೆ ಸಾಲ ಸಿಗಲಿದೆ.

ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ನೆರವಾಗಲು ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಜಾರಿಗೆ ತರಲಾಗುತ್ತದೆ. ಇದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ 3600 ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದೆ.

ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಯಾವ ಗ್ಯಾರಂಟಿ ಇಲ್ಲದೇ ಸಾಲ ಸಿಗಲಿದೆ. ಇದಕ್ಕಾಗಿ 2024 ರಿಂದ 2031 ರವರೆಗೆ 3600 ಕೋಟಿ ರೂ. ಮೀಸಲಿಡಲಾಗುತ್ತದೆ. ಪ್ರತೀ  ವರ್ಷ 1 ಲಕ್ಷದಂತೆ ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ವಾರ್ತಾ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

ಅರ್ಹತೆಗಳೇನು?
ಈ ಯೋಜನೆಯ ಅನ್ವಯ ಸಾಲ ಪಡೆಯಲು ಕುಟುಂಬದ ಆದಾಯ 4.5 ಲಕ್ಷದೊಳಗೆ ಇದ್ದರೆ ಶೇ.100 ಬಡ್ಡಿ ರಹಿತ ಸಾಲ ಸಿಗುತ್ತದೆ. ಕುಟುಂಬದ ಆದಾಯ 8 ಲಕ್ಷದವರೆಗೆ ಇದ್ದರೆ 3% ಬಡ್ಡಿದರದಲ್ಲಿ ಸಾಲ ಸಿಗಲಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ ರಾಂಕ್ ಪಡೆದಿರುವ 100 ಸರ್ಕಾರೀ ಮತ್ತು ಖಾಸಗೀ ಸಂಸ್ಥೆಗಳು, ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು. ಅಲ್ಲದೇ ಪ್ರತೀ ವರ್ಷ ಈ ಯೋಜನೆಯನ್ನು ಅಪ್ ಡೇಟ್ ಮಾಡಲಾಗುವುದು.

ಈ ಯೋಜನೆಯಲ್ಲಿ ವಿದ್ಯಾರ್ಥಿಯ ಭೋಧನಾ ಶುಲ್ಕ, ಅವರು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಗಳಿಗೆ ವ್ಯಯಿಸುವ ಇತರೆ ಖರ್ಚನ್ನು ಭರಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments