Select Your Language

Notifications

webdunia
webdunia
webdunia
webdunia

ಪಿಎಂ ಇಂಟರ್ನ್ ಶಿಪ್ ಯೋಜನೆಗೆ ಚಾಲನೆ: 5 ಸಾವಿರ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ

Narendra Modi

Krishnaveni K

ನವದೆಹಲಿ , ಶುಕ್ರವಾರ, 4 ಅಕ್ಟೋಬರ್ 2024 (10:14 IST)
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿರುವ ಪಿಎಂ ಇಂಟರ್ನ್ ಶಿಪ್ ಯೋಜನೆ ಚಾಲನೆಗೆ ಬಂದಿದ್ದು, ಇದಕ್ಕೆ ಅರ್ಜಿ ಹಾಕುವುದು ಹೇಗೆ ಎಂದು ವಿವರಕ್ಕಾಗಿ ಇಲ್ಲಿ ನೋಡಿ.

ಇತ್ತೀಚೆಗೆ ಕೇಂದ್ರ ಬಜೆಟ್ ನಲ್ಲಿ ಉನ್ನತ ಕಂಪನಿಗಳಲ್ಲಿ ಇಂಟರ್ನ್ ಶಿಪ್ ಮಾಡುವ ಯುವಕ-ಯುವತಿಯರಿಗೆ ಮಾಸಿಕ 5,000 ರೂ. ಇಂಟರ್ನ್ ಶಿಪ್ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಈ ಯೋಜನೆಗೆ ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ ಎನ್ನಲಾಗಿದ್ದು, ಇದಕ್ಕೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಮಾಸಿಕ 5 ಸಾವಿರ ರೂ.ನಂತೆ ವರ್ಷಕ್ಕೆ ಇಂಟರ್ನ್ ಶಿಪ್ ಮಾಡುವ ಯುವಕ-ಯುವತಿಯರಿಗೆ 66 ಸಾವಿರ ರೂ. ಸಿಗಲಿದೆ. ಸುಮಾರು 1.25 ಲಕ್ಷ ಯುವಕ-ಯುವತಿಯರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಪ್ರೋತ್ಸಾಹ ಧನದ ಜೊತೆಗೆ ಉದ್ಯೋಗ ಕೌಶಲ್ಯ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.

21 ರಿಂದ 24 ವರ್ಷದೊಳಗಿನ ಇಂಟರ್ನ್ ಶಿಪ್ ಮಾಡುವ ಕನಿಷ್ಠ 10 ನೇ ತರಗತಿ ಪೂರ್ಣಗೊಳಿಸಿರುವ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. ಅಥವಾ ಐಐಟಿ, ಡಿಪ್ಲೊಮಾ, ಬಿಎ, ಬಿಎಸ್ ಸಿ ಅಥವಾ ಬಿಕಾಂ ಪದವೀಧರರೂ ಸಲ್ಲಿಸಬಹುದು. ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬದವರು, ಆದಾಯ ತೆರಿಗೆ ಸಲ್ಲಿಸುವವರು ಅರ್ಜಿ ಸಲ್ಲಿಸುವ ಹಾಗಿಲ್ಲ. ಅಕ್ಟೋಬರ್ 12 ರಿಂದ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಅಕ್ಟೋಬರ್ 26 ರಂದು ಅರ್ಹ ಅರ್ಜಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 27 ರಿಂದ ನವಂಬರ್ 7 ರವರೆಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನವಂಬರ್ 15 ರಿಂದ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿಗಳಿಂದ ಆಫರ್ ಲೆಟರ್ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದಿಂದ 4,500 ರೂ. ಮತ್ತು ಕಂಪನಿಗಳಿಂದ 5,000 ರೂ. ವೇತನ ಸಿಗಲಿದೆ. https://pminternship.mca.gov.in/login/ ಎಂಬ ವೆಬ್ ಸೈಟ್ ನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ, ಯೆಲ್ಲೊ ಅಲರ್ಟ್ ಘೋಷಣೆ