Webdunia - Bharat's app for daily news and videos

Install App

ಮೈಸೂರಿಗೆ ಪ್ರಧಾನಿ ಮೋದಿ; ಡಿಕೆಶಿ ಲೇವಡಿ

Webdunia
ಶನಿವಾರ, 8 ಏಪ್ರಿಲ್ 2023 (20:30 IST)
ಚಾಮರಾಜನಗರದಲ್ಲಿನ ಬಂಡೀಪುರ ಅರಣ್ಯವನ್ನ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ನಾಳೆ ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಇಂದು ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್​​​​​​​ ಬ್ಲೂ ಹೋಟೆಲ್​ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್​ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ. ಇನ್ನು ಈ ಕುರಿತು KPCC ಅಧ್ಯಕ್ಷ D.K. ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಮೋದಿ ಎಷ್ಟು ಬಾರಿ ಬೇಕಾದ್ರೂ ಟೂರ್ ಬರಲಿ, ದಿನಾ ಇಲ್ಲೇ ಇರಲಿ, ನಮಗೆ ಬೇಜಾರಿಲ್ಲ.. ಅವರ ಪಾರ್ಟಿ ವೀಕ್ ಆಗಿದೆ ಅಂತಾ ಅರ್ಥ ಆಗಿದೆ. ಅವರದ್ದು 60-65 ಸೀಟ್ ಅಷ್ಟೇ, ಅವರು ಸೋಲನ್ನ ಒಪ್ಪಿಕೊಳ್ತಿದ್ದಾರೆ ಎಂದು ಲೇವಡಿ ಮಾಡಿದ್ರು.. ಇನ್ನು ಕಾಂಗ್ರೆಸ್​ ಬಂಡಾಯ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಕಾಂಗ್ರೆಸ್ ಪಾರ್ಟಿ ಸಮುದ್ರವಿದ್ದಂತೆ, ನೂರಾರು ಹೊಳೆಗಳು ಬಂದು ಸೇರಿಕೊಳ್ತಾವೆ.. ಎಷ್ಟು ಜನ ಬೇರೆ ಪಾರ್ಟಿಗಳಿಂದ ಕಾಂಗ್ರೆಸ್​ಗೆ ಬಂದಿಲ್ವಾ? ಎಂದು ಪ್ರಶ್ನಿಸಿದ್ರು. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಆಗಮನ ಕುರಿತು ಮಾಜಿ ಸಿಎಂ HDK ಕುಹಕವಾಡಿದ್ದು, ಪ್ರಧಾನಿ ಹುಲಿ ವಿಹಾರಕ್ಕೆ ಬರುತ್ತಿದ್ದಾರೆ, ರಾಜ್ಯದ ಜನತೆಯ ವಿಹಾರಕ್ಕೆ ಅಲ್ಲ‌. ರಾಜ್ಯದ ಜನರ ಕಷ್ಟಕ್ಕಾಗಿ ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments