Select Your Language

Notifications

webdunia
webdunia
webdunia
webdunia

ತಂಡದಿಂದ ಕೈ ಬಿಟ್ಟಿರುವುದಕ್ಕೆ ಬಿಎಸ್‌ವೈ ಅವರನ್ನೇ ಕೇಳಿ: ಈಶ್ವರಪ್ಪ

ತಂಡದಿಂದ ಕೈ ಬಿಟ್ಟಿರುವುದಕ್ಕೆ ಬಿಎಸ್‌ವೈ ಅವರನ್ನೇ ಕೇಳಿ: ಈಶ್ವರಪ್ಪ
ಬೆಳಗಾವಿ , ಮಂಗಳವಾರ, 27 ಡಿಸೆಂಬರ್ 2016 (18:11 IST)
ರಾಜ್ಯದಲ್ಲಿ ಬರ ಅಧ್ಯಯನ ನಡೆಸಲು ರಾಜ್ಯ ಬಿಜೆಪಿ ಘಟಕ 3 ತಂಡಗಳನ್ನು ರಚಿಸಿದೆ. ಆದರೆ, ಬರ ಅಧ್ಯಯನ ತಂಡದಿಂದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಕಡೆಗಣಿಸಲಾಗಿದೆ. 
ಬರ ಅಧ್ಯಯನ ತಂಡದ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಆರ್‌.ಅಶೋಕ್ ವಹಿಸಿಕೊಂಡಿದ್ದಾರೆ. ಈ ಮೂಲಕ ಪಕ್ಷದ ಚಟುವಟಿಕೆಯಿಂದ ಕೆ.ಎಸ್.ಈಶ್ವರಪ್ಪ ಕೊಕ್ ನೀಡಲಾಗಿದೆ. 
 
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟಹಾಕುವ ಮೂಲಕ ಕೆ.ಎಸ್.ಈಶ್ವರಪ್ಪ ಅವರು ಬಿಎಸ್‌ವೈ ಅವರಿಗೆ ಶೆಡ್ಡು ಹೊಡೆದಿದ್ದರು. ಹೀಗಾಗಿ ಅವರನ್ನು ಬರ ಅಧ್ಯಯನ ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. 
 
ಬರ ಅಧ್ಯಯನ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಈ ಹಿಂದೆ ನಾನು ಹಲವು ಬಾರಿ ಬರ ಅಧ್ಯಯನ ಕೈಗೊಂಡಿದ್ದೇನೆ. ಹಾಗೂ ಅಧಿಕಾರಿಗಳ ಜೊತೆ ಚರ್ಚೆಯೂ ನಡೆಸಿದ್ದೇನೆ. ಆದರೆ, ಅಧ್ಯಯನ ತಂಡದಿಂದ ನನ್ನನ್ನು ಕೈಬಿಟ್ಟಿರುವ ಕುರಿತು ಬಿಎಸ್‌ವೈ ಅವರನ್ನೇ ಕೇಳಿ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ದೇಶದ ಜನರನ್ನು ಎರಡು ಬಾರಿ ಮೂರ್ಖರನ್ನಾಗಿಸಿದ್ದಾರೆ: ಕಾಂಗ್ರೆಸ್